ಸಂಕೇತನನ್ನ ಹೊತ್ತು ಜೀವ ಉಳಿಸಲು ಮುಂದಾಗಿದ್ದು ಮೇಸ್ಟ್ರು ವಿದ್ಯಾದರ್! Teacher Vidyadar stepped forward to save sanketh life!

 SUDDILIVE || SHIVAMOGGA

ಸಂಕೇತನನ್ನ ಹೊತ್ತು ಜೀವ ಉಳಿಸಲು ಮುಂದಾಗಿದ್ದು ಮೇಸ್ಟ್ರು ವಿದ್ಯಾದರ್!  Teacher Vidyadar stepped forward to save sanketh life!

Vidhyadar, sanketh

ಶಿವಮೊಗ್ಗದ ಸೂಳೆ ಬೈಲಿನಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿ ಸಂಕೇತ್ ಹತ್ಯೆಗೆ ಇಡೀ ಸರ್ಕಾರಿ ಶಾಲಾ ಆಡಳಿತ ಮಂಡಳಿ ದುಃಖತಪ್ತವಾಗಿದೆ. ಶಾಲಾ ಮುಖ್ಯ ಶಿಕ್ಷಕರು ಮತ್ತು ಆತನಿಗೆ ಶಿಕ್ಷಣ ನೀಡುತ್ತಿದ್ದ ಅಚ್ಚುಮೆಚ್ಚಿನ ಮೇಷ್ಟ್ರು ವಿದ್ಯಾದರ್ ಬಾಲಕನ ಹತ್ಯೆಗೆ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ. 

ಸರ್ಕಾರಿ ಶಾಲೆಯಲ್ಲಿ ಸಂಕೇತ್ ಓದುವುದರಲ್ಲಿ ಮುಂದಿದ್ದ. ಆತ ಕುಸಿದು ಬಿದ್ದಾನೆ ಎಂದು ಸಂಕೇತನ ಸಹಪಾಠಿ ಶಾಲೆಗೆ ಬಂದು ಹೇಳಿದಾಗ ತಕ್ಷಣವೇ ಓಡಿ ಹೋಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು ಈ ಮೇಷ್ಟ್ರು ವಿದ್ಯಾದರ್.  ತಮ್ಮ ನೆಚ್ಚಿನ ಶಿಷ್ಯನನ್ನ ಕಳೆದುಕೊಂಡು ದುಖತಪ್ತರಾಗಿದ್ದಾರೆ. 

ಇಂದು ಸಂಕೇತ್ ಅವರು ಮೃತಗೊಂಡು  ಮೂರನೇ ದಿನ. ಇಂದು ಆತನ ಕುಟುಂಬ ಹಾಲುತುಪ್ಪ ಎರೆದು ಬಂದಿದೆ. ಕೇರಿ ತುಂಬ ಮಾರಿ ಸಂಭ್ರಮದಲ್ಲಿದ್ದರೆ. ಸಂಕೇತನ ಮನೆ ಮತ್ತು ಶಾಲೆಗೆ ಸೂತಕ ಕವಿದಿದೆ. ಸೂತಕ ಛಾಯೆಯಲ್ಲೇ ಮುಳುಗಿದ ಕುಟುಂಬ ಮತ್ತು ಆತನ ಮೇಷ್ಟ್ರುಗಳು ಸಂಕೇತನ ಸ್ವಭಾವವನ್ನ ನೆನೆದು ಹಾಡಿ ಕೊಂಡಾಡಿದ್ದಾರೆ. 

ಬಾಳಿ ಬದುಕ ಬೇಕಿದ್ದ ಬಾಲಕ ಸಂಕೇತ್ ನ ಜೀವ ಕಮರಿಹೋಗಿದೆ. ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದಾನೆ. ಆತನ ತಾತ ಮೊಮ್ಮಗನ ಫೋಟೊ ಮೇಲೆ ಬೆರಳಾಡಿಸಿ ಕಣ್ಣನ್ನ ಒದ್ದೆ ಮಾಡಿಕೊಂಡಿದ್ದಾರೆ.  ಶಾಲೆಯ ಅಚ್ಚುಮೆಚ್ಚಿನ ಮೇಷ್ಟ್ರು, ಸ್ನೇಹಿತರು ಸಂಕೇತನನ್ನ ನೆನೆದು ನೆನೆದು ದಿನ ಕಳೆಯವ ಸ್ಥತಿ ತಲುಪಿದ್ದಾರೆ. ಪ್ರಕರಣ ಏನೇ ಇರಲಿ ಪುಟಾಣಿಯ ಬಲಿ ವ್ಯರ್ತವಾಗದಿರಲಿ...

Teacher Vidyadar stepped forward to save sanketh life!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close