ಮೃತರ ಕುಟಂಬಕ್ಕೆ ವೈಯುಕ್ತಿಕ ಪರಿಹಾರ-ಆದರೆ ಸರ್ಕಾರ ನಡೆಸಿ ಇಲ್ಲ ಜಾಗ ಖಾಲಿ ಮಾಡ್ರಿ ಎಂದ ಸಂಸದರು- personal compensation by MP for the family of the deceased

 SUDDILIVE|| SHIVAMOGGA

ಮೃತರ ಕುಟಂಬಕ್ಕೆ ವೈಯುಕ್ತಿಕ ಪರಿಹಾರ-ಆದರೆ ಸರ್ಕಾರ ನಡೆಸಿ ಇಲ್ಲ ಜಾಗ ಖಾಲಿ ಮಾಡ್ರಿ ಎಂದ ಸಂಸದರು-personal compensation by MP for the family of the deceased - but the government will not do it and vacate the power seat  

Mp, compansation

ಊರಗಡೂರಿನಲ್ಲಿ ಅಪ್ರಾಪ್ತ ಬಾಲಕರಿಂದ ಹತ್ತೆಯಾದ ಬಾಲಕ ಸಂಕೇತ್ ಮನೆಗೆ ಶಿವಮೊಗ್ಗ ಸಂಸದರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ 1 ಲಕ್ಷ ನಗದು ನೀಡಿ ನಿಮ್ಮೊಂದಿಗೆ ನಾವು ಇರುವುದಾಗಿ ಭರವಸೆ ನೀಡಿದರು. 

ಈ ವೇಳೆ ಮಾಧ್ಯಮಗಳಿಗೆ ಮಾತನಾಡಿ ಸೋಮವಾರ ತ್ರಿವಿನ್ ಡ್ರಂನಲ್ಲಿದ್ದಾಗ ವಿಷಯ ಬಾಲಕನ ಹತ್ಯೆ ತಿಳಿದು ಬಂದಿದೆ. ಶಿವಮೊಗ್ಗದಲ್ಲಿ ಒಂದು ಕಡೆ ಮಾರಿಕಾಂಬ ದೇವಿಯ ಜಾತ್ರೆ ನಡೆದರೆ ಮತ್ತೊಂದು ಕಡೆ ರಂಜಾನ್ ಹಬ್ಬ ನಡೆಯುತ್ತಿದೆ. ಮಕ್ಕಳ ನಡುವಿನ ಜಗಳ ಬಿಡಸಲು ಹೋದವನ ಹತ್ಯೆಯಾಗಿದೆ. ಇನ್ನೂ ಎಷ್ಟು ಜನರ ಹಿಂದೂಗಳ ಹತ್ಯೆ ನಡೆಯಬೇಕು ಎಂದು ಪ್ರಶ್ನಿಸಿದರು. 

ಎಲ್ಲಾದರೂ ಸಣ್ಣ ಹುಡುಗರನ್ನ ಮುಂದಿಟ್ಟುಕೊಂಡು ಹತ್ಯೆ ನಡೆಯುತ್ತಿದೆಯಾ? ಎಂಬ ಅನುಮಾನವನ್ನೂ ವ್ಯಕ್ತ ಪಡಿಸಿದ ಸಂಸದರು ಮೊನ್ನೆ ಸೂಳೆಬೈಲು ಮತ್ತೂರು ರಸ್ತೆಯಲ್ಲಿ ಅಪ್ರಾಪ್ತ ಬಾಲಕರು ಬೈಕ್ ಚಲಾಯಿಸಿ ಕೋಲು ತೆಗೆದುಕೊಂಡು ಹೋಡೆದುಕೊಂಡು ಹೋಗಿದ್ದಾರೆ. ಈ ಪ್ರಕರಣ ಎಫ್ಐಆರ್ ದಾಖಲಾಗಿದೆ. ಶಿರಾಳಕೊಪ್ಪದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ.  ಹೀಗೆ ಅಪ್ರಾಪ್ತರನ್ನ ಮುಂದೆ ಬಿಟ್ಟುಕೊಂಡು ಹತ್ಯೆಗೆ ಒಂದು ಕಮ್ಯೂನಿಟಿ ಮುಂದಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. 



ಅಪ್ರಾಪ್ತತರನ್ನ ಮುಂದಿಟ್ಟುಕೊಂಡು ಹಿಂದೂಗಳ ಮೇಲೆ ಹಲ್ಲೆ


ರಾಜ್ಯದಲ್ಲಿ ಅನ್ಯಕೋಮಿನ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಲು ಸಾಧ್ಯವಾಗುತ್ತಿಲ್ಲವಾ? ಇನ್ನು ಎಷ್ಟು ಜನ ಹಿಂದುಗಳ ಬಲಿಯನ್ನು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದ್ದೀರಿ ಎಂದು ಪ್ರಶ್ನಿಸಿದರು. ಧರ್ಮ ಓಲೆಗೆ ಎಲ್ಲಿ ಕಾಂಗ್ರೆಸ್ ತೊಡಗಿದೆ ಎಲ್ಲಿಯವರೆಗೆ ಈ ಧರ್ಮ ಓಲೈಕೆಯನ್ನು ಮಾಡಲಾಗುತ್ತದೆ. ಅನ್ಯ ಧರ್ಮ ನವರ ದಬ್ಬಾಳಿಕೆ ಶಿವಮೊಗ್ಗದಲ್ಲಿ ಸೇರಿದಂತೆ ರಾಜ್ಯದಂತ ಹೆಚ್ಚಾಗಿದೆ. ಕಾಂಗ್ರೆಸಿನ ಹೋಲಿಕೆ ರಾಜಕಾರಣದಿಂದಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಸಣ್ಣ ಮಕ್ಕಳ ನ ಮುಂದಿಟ್ಟುಕೊಂಡು ನಡೆಯುತ್ತಿರುವ ಹಿಂದುಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು

ಸಣ್ಣ ಮಕ್ಕಳು ಸಹ ಗಾಂಜಾ ನಿಷೇಯಲ್ಲಿದ್ದರೂ ಎಂಬ ಅನುಮಾನವೂ ಸಹ ಕೇಳಿ ಬರ್ತಾ ಇದೆ. ಊರಿನ ಕೇರಿ ಕೇರಿಯಲ್ಲಿ ಮಧ್ಯದ ಅಂಗಡಿ ಮಾದಕ ವಸ್ತುಗಳು ಸಿಗುವಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿರುವಂತೆ ಕಂಡುಬರುತ್ತದೆ. ವ್ಯಸನಿಗಳನ್ನ ಸರ್ಕಾರವೇ ಪ್ರಚೋದಿಸುತ್ತಿರುವಂತೆ ಕಂಡುಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮೃತ ಕುಟುಂಬಕ್ಕೆ ಪುಡಿಗಾಸು ಬೇಡ ಒಂದು ಕೋಟಿ ಡಿಪಾಸಿಟ್ ಮಾಡಿ


ಪುಡಿ ಕಾಸು ನೀಡಿ ಕುಟುಂಬವನ್ನ ಸಂತಹಿಸುವ ಪ್ರಯತ್ನ ಸರ್ಕಾರ ನಿಲ್ಲಿಸಬೇಕು ಕನಿಷ್ಠ ಒಂದು ಕೋಟಿಯನ್ನ ಆದರೂ ಕುಟುಂಬಕ್ಕೆ ನೀಡಬೇಕು. ಮೃತ ಕುಟುಂಬಕ್ಕೆ ಫಿಕ್ಸೆಡ್ ಡಿಪಾಸಿಟ್ ನಾಗಿ ಒಂದು ಕೋಟಿ ನೀಡಬೇಕು. ಕುಟುಂಬ ಜೀವನ ನಿರ್ವಹಣೆಗೂ ಸಹ ಆಧಾರವಾಗಬೇಕು.ಮೃತ ಸಂಕೇತ್ ಅವರ ಏರಿಯಾದಲ್ಲಿ ಭಯದ ವಾತಾವರಣವಿದೆ.  ಮನೆ ಮುಂದೆ ರಂಗೋಲಿ ಹಾಕಿಕೊಂಡು ಹಬ್ಬ ಆಚರಿಸುವ ಸಂದರ್ಭದಲ್ಲಿ ಸ್ಮಶಾನ ಮೌನವಾಗಿದೆ. ಎಲ್ಲೋ ಕುಳಿತುಕೊಂಡು ಸಾಂತ್ವನ ಹೇಳಿದರೆ ಸಾಲದು.  ಸರ್ಕಾರ ಜವಬ್ದಾರಿತನ ಮೆರೆಯಬೇಕು. ಇಂತಹ ಘಟನೆಯನ್ನ ನಿರ್ಬಂಧಿಸಬೇಕು ಎಂದರು. 


ಡಿಸಿಎಂ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿಕೊಂಡಿದ್ದಾರೆ


ಆಂಧ್ರದ ಮೂಲಕ ಸೇರಿದ ಶಿವಮೊಗ್ಗ ಸೇರಿದಂತೆ ಕರ್ನಾಟಕಕ್ಕೆ ಡ್ರಗ್ ಮಾಫಿಯಾ ಗಳು ಮಾಹಿತಿ ಲಭ್ಯವಿದೆ. ಬೇರೆ ರಾಜ್ಯದಿಂದ ಶಿವಮೊಗ್ಗ ಸೇರಿದಂತೆ ರಾಜ್ಯಕ್ಕೆ ಡ್ರಗ್ ಮಾಫಿಯಾ ಗಾಂಜಾ ಮಾಫಿಯಾ ಗಳು  ಪ್ರವೇಶಿಸುತ್ತಿವೆ. ಮೊನ್ನೆ ಬೆಂಗಳೂರಿನಲ್ಲೂ ಸಹ ದೊಡ್ಡ ಡ್ರಗ್ ಜಾಲ ಪತ್ತೆಯಾಗಿದೆ. ಹೊರರಾಜ್ಯದ ಪೊಲೀಸನವರು ನಮ್ಮ ರಾಜ್ಯಕ್ಕೆ ಬಂದು ಆರೋಪಿಗಳನ್ನು ಪತ್ತೆ ಮಾಡುವ ಸಂದರ್ಭ ಬಂದಿದೆ. ಉಪಮುಖ್ಯಮಂತ್ರಿಗಳು ಗೃಹ ಸಚಿವರು ಏನು ಮಾಡುತ್ತಿದ್ದೀರಿ ಸಿಎಂ ಸ್ಥಾನಕ್ಕೆ ಟವಲ್ ಹಾಕೊಂಡು ಕುಳಿತಿರುವುದು ಮಾತ್ರ ಸುದ್ದಿಯಾಗುತ್ತಿದೆ ನಿಮ್ಮ ಕಾರ್ಯಾಚರಣೆ ಎಲ್ಲೋ ಸುದ್ದಿಯಾಗುತ್ತಿಲ್ಲ ಎಂದು ದೂರಿದರು


ಸೂಳೆಬೈಲಿಗೆ ನೂತನ ಠಾಣೆ ನಿರ್ಮಿಸಿ


ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಣಾ ವಿಚಾರದಲ್ಲಿ ಹೆಚ್ಚಿನ ಗಮನ ಕೊಟ್ಟು ಈ ಕಡೆ ಕಾರ್ಯೋನ್ಮುಖ ರಾಗಬೇಕು. ಸೂಳೇ ಬೈಲಿನ ಭಾಗದಲ್ಲಿ ಈ ಹಿಂದೆ ಪೊಲೀಸ್ ಉಪಟಾಣೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು ಆದರೆ ಈಗ ಉಪಟಣೆ ಮಾತ್ರ ಸಾಕಾಗುವುದಿಲ್ಲ ನೂತನ ಪೊಲೀಸ್ ಠಾಣೆಯನ್ನೇ ಆರಂಭಿಸಬೇಕಾಗಿದೆ ಎಂದು ಆಗ್ರಹಿಸಿದರು. 

ಯುವಕರು ಹತಾಶೆಯಾಗಿದ್ದಾರೆ

ಗರೀಬಿ ಹಟಾವೋ ಎಂದು ಗದ್ದಿಗೆ ಹಿಡಿದಿದ್ದ ಕಾಂಗ್ರೆಸ್ ನಾಯಕರ ಗರೀಬಿ ಆಟವೋ ಮುಗಿದಿದೆ. ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಸರ್ಕಾರ ಉದ್ಯೋಗವನ್ನು ಸೃಷ್ಟಿಸಲು ಇಲ್ಲ ನೀಡಲೂ ಇಲ್ಲ. ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿ ಕುರಿತಂತೆ ಧಾರವಾಡದಲ್ಲಿ ನಡೆಯುತ್ತಿರುವ ಯುವಕರ ಹೋರಾಟಕ್ಕೆ ಬಿಜೆಪಿ ಕಾರಣ ಎಂದು ಬೊಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ ಜನ ನಿಮಗೆ ಆಶೀರ್ವಾದ ಮಾಡಿರುವುದು ನಮಿಗಲ್ಲ ಎಂದು ವ್ಯಂಗ್ಯವಾಡಿದರು.

ಯುವಕರು ಹತಾಶೆಗೆ ತಲುಪಿದ್ದಾರೆ ಹಾಗಾಗಿ ಉದ್ಯೋಗದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಖಾಲಿ ಇರುವ ಲಕ್ಷಾನುಗಟ್ಟಲೆ ಉದ್ಯೋಗವನ್ನು ನೀಡಲು ನೋಟಿಫಿಕೇಶನ್ ಹೊರಡಿಸ ಬೇಕು. ಉದ್ಯೋಗ ಸೃಷ್ಟಿವಾಗದೆ ಇದ್ದದ್ದಕ್ಕೆ ಈ ಹಿಂದೆ ನಕ್ಸಲಿಜಮ್ ಆರಂಭವಾಗಿತ್ತು ಈಗ ಮೋದಿಜಿ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ತಣ್ಣಗಾಗಿಸುವ ತಗ್ಗಿಸುವ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಸರ್ಕಾರ ನಾಳೆ ಬಜೆಟನ್ನು ಮಂಡಿಸುತ್ತಿದೆಯಾಲಾದರೂ ಯುವಕರಿಗೆ ಉದ್ಯೋಗ ಸೃಷ್ಟಿಸುವ ಅಥವಾ ನೀಡುವ ಕೆಲಸವನ್ನ ಮಾಡಬೇಕು ಗ್ಯಾರಂಟಿ ಜೊತೆಯಲ್ಲೇ ಈ ಕೆಲಸ ನಡೆಯಲಿ ಎಂದು ಆಶಿಸಿದರು.

ಆದರೆ ಸರ್ಕಾರ ನಡೆಸಿ ಇಲ್ಲ ಜಾಗ ಖಾಲಿ ಮಾಡಿ

ಯುವ ನಿಧಿ ಕಾರ್ಯಕ್ರಮವನ್ನು ತಂದ ಸರ್ಕಾರ ಕೇವಲ 30 ರಿಂದ 40 ಶೇಕಡವಾರು ಮಾತ್ರ ಯುವಕರಿಗೆ ತಲುಪುವಂತೆ ನೋಡಿಕೊಂಡಿದೆ ವಿನಹ ಸಂಪೂರ್ಣವಾಗಿ ಯಾರಿಗೂ ಯುವನಿಧಿ ಹಣ ತಲುಪುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸುಮಾರು 1500 ಬಸ್ ರೂಟುಗಳನ್ನು ಬಂದು ಮಾಡಿ ನಗರಗಳಿಗೆ ನೀಡುತ್ತಿದ್ದಾರೆ ಜನ ಸರ್ಕಾರದ ನಡುವಳಿಕೆಯಿಂದ ಬೇಸತ್ತು ಹೋಗಿದ್ದಾರೆ ಹೀಗಾಗಿ ಇದರ ಮತ್ತೊಂದು ರೂಪವಾಗಿ ನೆನ್ನೆ ಧಾರವಾಡದಲ್ಲಿ ಯುವಕರು ರೊಚ್ಚಿಗೆದ್ದು ಬೀದಿಗೆ ಇಳಿದಿದ್ದಾರೆ.  ಹಾಗಾಗಿ ಈ ಬಜೆಟ್ಟಿನಲ್ಲಾದರೂ ಸರ್ಕಾರ ಉದ್ಯೋಗ ಸೃಷ್ಟಿ ಕುರಿತು ಯುವಕರಿಗೆ ಹೆಚ್ಚಿನ ಭರವಸೆ ನೀಡಬೇಕು. ಇಲ್ಲವಾದಲ್ಲಿ ನೀವು ಜಾಗ ಖಾಲಿ ಮಾಡಿ ಮೋದಿಜಿ ಅವರ ನೇತೃತ್ವದಲ್ಲಿ ಉದ್ಯೋಗವನ್ನು ಸೃಷ್ಟಿಸುವುದಾಗಿ ತಿಳಿಸಿದರು.

ಕನ್ನಡದ ಎಫ್ ಎಂ ಲೋಕಾರ್ಪಣೆ

ಭದ್ರಾವತಿಯ ಆಕಾಶವಾಣಿ ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಎದುರು ನಿರ್ಮಾಣಗೊಂಡಿದ್ದ ಟಿವಿ ಟವರ್ ಗಳನ್ನ ಸೇರಿಸಿ ಎಫ್ ಎಂ ರೇಡಿಯೋನಿರ್ಮಿಸಲಾಗುತ್ತಿದೆ. ನಾಳೆ ಪ್ರಸಾರ ಭಾರತಿ ಕೇಂದ್ರ ಸಚಿವ ಮುರುಗನ್ ಉದ್ಘಾಟಿಸಲಾಗುತ್ತಿದೆ. ಟಿವಿ ವರ್ ನಿಷ್ಕ್ರಿಯೆ ಗೊಂಡಿತ್ತು ಅದನ್ನ ಗುರುತಿಸಿ 10 ಬಿಹೆಚ್ ಟ್ರಾನ್ಸ್ ಮೀಟರ್ ನ್ನ ಕಳೆದ ವರ್ಷ ಅಳವಡಿಸಲಾಗಿತ್ತು. ಈಗ ನಾಳೆ ಲೋಕಾರ್ಪಣೆಯಾಗಲಿದೆ. ಇದು ಕನ್ನಡದ ಎಫ್ ಎಂ ರೇಡಿಯೋವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದರು. 

personal compensation by MP for the family of the deceased - but the government will not do it and vacate the power seat

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close