SUDDILIVE || CHITRADURGA
ಹೊಳಲ್ಕೆರೆ ರೈಲ್ವೆ ಗೇಟ್ ಸ್ಥಳಾಂತರ ಕಾಮಗಾರಿ ಹಿನ್ನಲೆಯಲ್ಲಿ ನಾಳೆ ಮಾರ್ಗಬದಲಾವಣೆಗೆ ಸೂಚನೆ- Notice of route change tomorrow due to Holalkere project gate relocation work
ರೈಲ್ವೆ ಗೇಟ್ ಸ್ಥಳಾಂತರ ಕಾಮಗಾರಿ ಸಲುವಾಗಿ ಹೊಳಲ್ಕೆರೆ ತಾಲೂಕು ಅರೇಹಳ್ಳಿ ಗ್ರಾಮದ ಎಲ್ ಸಿ ನಂಬರ್ 162 ನ ಮೂಲಕ ಚಲಿಸುವ ವಾಹನಗಳಿಗೆ ಮಾರ್ಗವನ್ನು ಬದಲಿಸಿ ಚಿತ್ರದುರ್ಗ ಡಿಸಿ ಆದೇಶಿಸಿದ್ದಾರೆ.
ಫೆಬ್ರುವರಿ 20ರಂದು ನಾಳೆ ರಾಷ್ಟ್ರೀಯ ಹೆದ್ದಾರಿ 369ರ ಮೂಲಕ ಹಾದು ಹೋಗುವ ಈ ಎಲ್ ಸಿ ಗೇಟ್ ನಂಬರ್ 162 ಸ್ಥಳಾಂತರಗೊಳಿಸಲು ಆದೇಶಿಸಿರುವುದರಿಂದ ಕಾಮಗಾರಿ ಕೈಗೊತ್ತಿಕೊಳ್ಳಲಾಗುತ್ತಿದೆ
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಶಿವಮೊಗ್ಗ ಮಾರ್ಗದಲ್ಲಿ ಚಲಿಸುವ ವಾಹನಗಳಿಗೆ ಮಾರ್ಗ ಬದಲಾಯಿಸಿ ಕೊಡಲಾಗಿದೆ. ಚಿತ್ರದುರ್ಗ ಕಡೆಯಿಂದ ಚಲಿಸುವ ವಾಹನಗಳು ಅರೆಹಳ್ಳಿ ಗ್ರಾಮದಿಂದ ಮಾಳೇನಹಳ್ಳಿ ಗ್ರಾಮಕ್ಕೆ ನಂತರ ಅಲ್ಲಿಂದ ಆರ್ ನುಲೇನೂರು ಮತ್ತು ಬಸಾಪುರ ಗೇಟ್ಗೆ ಬಂದು ಎನ್ಎಚ್ 369 ರಸ್ತೆಯನ್ನು ಸೇರಬಹುದಾಗಿದೆ.
ಅದೇ ರೀತಿ ಶಿವಮೊಗ್ಗ ಚೆನ್ನಗಿರಿ ಕಡೆಯಿಂದ ಬರುವ ಲಗುವಾಹನಗಳು ಮಲ್ಲಾಡಿಹಳ್ಳಿ ಗೇಟ್ನಿಂದ ಶಿವಪುರ ಕುನಗಲಿ ಮಲ್ಕಾಪುರ ಮಾರ್ಗವಾಗಿ ಎಸ್ ಹೆಚ್ 47 ರಸ್ತೆ (ಹೊಳಲ್ಕೆರೆ ಹಿರೇಕೆರೆ ರಸ್ತೆ) ಗೆ ಸೇರಿ ಅಲ್ಲಿಂದ ಹೊಳಲ್ಕೆರೆ ಮೂಲಕ ಚಿತ್ರದುರ್ಗಕ್ಕೆ ಸಾಗಬಹುದಾಗಿದೆ ಮಲ್ಲಾಡಿ ಹಳ್ಳಿ ಕಡೆಯಿಂದ ಬರುವ ಬಾರಿ ವಾಹನಗಳು ಶಿವಪುರ, ಹುಲೇಮಳಲಿ, ಹೊಸಳ್ಳಿ, ಕೋಟೆಹಾಳ್ ಕ್ರಾಸ್ ಮೂಲಕ ಚಿಕ್ಕಜಾಜೂರು ಗೆ ಬಂದು ಅಲ್ಲಿಂದ ಹೊಳಲ್ಕೆರೆ ಮುಖಾಂತರ ಚಿತ್ರದುರ್ಗಕ್ಕೆ ಸಾಗಬಹುದಾಗಿದೆ.
Notice of route change tomorrow due to Holalkere project gate relocation work

