ಪ್ರಧಾನಿ ಮೋದಿಯನ್ನ ವಜಾಗೊಳಿಸಲು ಯೂತ್ ಕಾಂಗ್ರೆಸ್ ಆಗ್ರಹ-Youth Congress demands dismissal of Prime Minister Modi

 SUDDILIVE || SHIVAMOGGA

ಪ್ರಧಾನಿ ಮೋದಿಯನ್ನ ವಜಾಗೊಳಿಸಲು ಯೂತ್ ಕಾಂಗ್ರೆಸ್ ಆಗ್ರಹ-Youth Congress demands dismissal of Prime Minister Modi        

Youth, congress

ದೇಶದ ಮಾನವನ್ನು ಹರಾಜಿಗಿಟ್ಟು ಕಾಂಪ್ರಮೈಸ್ ಆದ PM ನರೇಂದ್ರಮೋದಿಯವರು ಪ್ರಧಾನಿ ಹುದ್ದೆಯಿಂದ ವಜಾ  ಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ನಗರ ಘಟಕ  ಅಗ್ರಹಿಸಿದೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮರ್ಯಾದೆಯನ್ನು ಕಳೆಯುತ್ತಿರುವ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಆಗ್ರಹಿಸಿ ನಗರ ಯುವ ಕಾಂಗ್ರೆಸ್ ವತಿಯಿಂದ ಶಿವಪ್ಪ ನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದೆ.  ಈ ವೇಳೆ  ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. 

ಪ್ರಸನ್ನಕುಮಾರ್  ಎಪ್ಸ್ಟೀನ್ ಫೈಲ್ಸ್ ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ದೊರೆ ಭೇಟಿ ಸಂದರ್ಭದಲ್ಲಿ 2017ರ ಜುಲೈ 9ರಂದು ತಮಗೆ ಬೆಂಬಲ ನೀಡುವಂತೆ ವಿದೇಶಿ ಪ್ರಧಾನಿಗಳೆದುರು ನೃತ್ಯ ಮಾಡುವ ಮೂಲಕ ದೇಶದ ಮಾನ ಹರಾಜಿಗಿಟ್ಟಿರುವುದು ಬಹಿರಂಗವಾಗಿದೆ.

ಇದು ವಿಶ್ವದಾದ್ಯಂತ ಚರ್ಚೆಯಾಗಿ ದೇಶದ ಮರ್ಯಾದೆ ಹೋಗಿದೆ. ದೇಶದ ಮಾನ ಹರಾಜಿಗಿಟ್ಟಿರುವ ಕಾಂಪ್ರಮೈಸ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೂಡಲೇ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕೆಂದು  ರಾಷ್ಟ್ರಪತಿಗಳನ್ನು ಒತ್ತಾಯಿಸಿಸಲಾಯಿತು. 

ಇದೇ ಸಂದರ್ಭದಲ್ಲಿ ಈ ಪ್ರತಿಭಟನೆ ಉದ್ದೇಶಕ್ಕೆ ಮಾತನಾಡಿದ KPCC ಪ್ರಧಾನ ಕಾರ್ಯದರ್ಶಿಗಳಾದ ಎನ್. ರಮೇಶ್ ಅಮೇರಿಕಾದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ಸುಂಕವಿಲ್ಲದೇ 0% ಸುಂಕದಲ್ಲಿ ನೇರವಾಗಿ ಭಾರತದ ಮಾರುಕಟ್ಟೆಗೆ ಅಮೇರಿಕಾದ ಉತ್ಪನ್ನಗಳು ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲೇ ಸಾಲದ ಸುಳಿಯಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಭಾರತದ ಬಡ ರೈತರು ಅಮೇರಿಕದಂತಹ ಅತ್ಯಂತ ಶ್ರೀಮಂತ ಕಾರ್ಪೋರೇಟ್ ಕೃಷಿ ಉದ್ಯಮಕ್ಕೆ ನಮ್ಮ ದೇಶದ ಬಡರೈತ ಪೈಪೋಟಿ ಕೊಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಿರ್ಧಾರ ದೇಶದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಕೊಂಡೊಯ್ಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಮಧುಸೂದನ್, ಗಿರೀಶ್, ಅಕ್ಬರ್,  ಯುವ ಕಾಂಗ್ರೆಸ್ ಶಿವಮೊಗ್ಗ ವಿಧಾನಸಭೆ ಅಧ್ಯಕ್ಷ ಚರಣ್ ಜಿ ಶೆಟ್ಟಿ, ಉತ್ತರ ಬ್ಲಾಕ್ ಅಧ್ಯಕ್ಷ ಗಿರೀಶ್, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿಗಳಾದ- ರೇಷ್ಮಾ, ಅಬ್ದುಲ್ ಸತ್ತರ್, ಆಕಾಶ್, ಮಲಗೊಪ್ಪ ಶಿವು, ಗೌತಮ್, ಟೋಫಿಕ್, ಬಾಬು, ಅಶೋಕ್, ರವಿ, ಲಿಂಗರಾಜು, ಅಭಿ, ಯುವರಾಜ್,  NSUI ನ ಜಿಲ್ಲಾ ಕಾರ್ಯಧ್ಯಕ್ಷ ರವಿ-ಕಾಟಿಕೆರೆ, ನಗರಾಧ್ಯಕ್ಷರ ರವಿ, ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಫರಾಜ್, ಶ್ರೀಕಾಂತ್, ಪ್ರತಾಪ್ ನೂರಾರು ಯುವಕರು ಪಾಲ್ಗೊಂಡು ಆಕ್ರೋಶ  ವ್ಯಕ್ತಪಡಿಸಿದ್ದರು.

Youth Congress demands dismissal of Prime Minister Modi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close