SUDDILIVE || BHADRAVATHI
ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ-Head-on collision between two-wheelers
ಭದ್ರಾವತಿಯ ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನದ ನಡುವೆ ಅಪಘಾತವಾಗಿದ್ದು ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದಾರೆ. ಇಬ್ಬರನ್ನೂ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿಯ ಜಂಕ್ಷನ್ ನಲ್ಲಿ ಟಿವಿಎಸ್ ಬೈಕ್ ಮತ್ತು ಹೊಙಡಾ ಡಿಯೋ110 ಮೊಪೆಡ್ ಗೆ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಅಪಘಾತದಲ್ಲಿ ಲಕ್ಷ್ವಳ್ಳಿ ನಿವಾಸಿ ಮಂಜುನಾಥ್ ಮತ್ತು ಮತ್ತೋರ್ವ ಯುವತಿ ಗಾಯಗಳಾಗಿದೆ. ಯುವತಿಯ ಹೆಸರು ತಿಳಿದು ಬಂದಿಲ್ಲ.
ಈ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ವರನ್ನೂ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Head-on collision between two-wheelers
