ರಸ್ತೆಗೆ ಅಡ್ಡಲಾಗಿ ಬಂದ ಕಾಳಿಂಗ ಸರ್ಪ ರಕ್ಷಿಸಲು ಹೋಗಿ ಲಾರಿ ಪಲ್ಟಿ-A lorry overturned while trying to rescue a python that crossed the road

 SUDDILIVE || THIRTHAHALLI

ರಸ್ತೆಗೆ ಅಡ್ಡಲಾಗಿ ಬಂದ ಕಾಳಿಂಗ ಸರ್ಪ ರಕ್ಷಿಸಲು ಹೋಗಿ ಲಾರಿ ಪಲ್ಟಿ-A lorry overturned while trying to rescue a python that crossed the road    

Lorry, overturn


ಅಡ್ಡಲಾಗಿ ಬಂದ ಕಾಳಿಂಗ ಸರ್ಪವನ್ನ ರಕ್ಷಿಸಲು ಹೋಗಿ ಅಡಿಕೆ ತುಂಬಿದ ಲಾರಿಯೊಂದು ಪಲ್ಟಿಹೊಡೆದಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. 

ಕೋಣಂದೂರು-ಅನಂತಪುರ ಮಾರ್ಗದ ಹಿರೇಸರ ಸಮೀಪ ಶನಿವಾರ ರಸ್ತೆಯಲ್ಲಿ ಬೃಹತ್ ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ, ಚಾಲಿ ಅಡಿಕೆ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಸಾಗರದಿಂದ ಕಾರ್ಕಳದತ್ತ ಸಾಗುತ್ತಿದ್ದ ಈ ವಾಹನಕ್ಕೆ ಗುಡ್ಡೆಕೊಪ್ಪ ಸಮೀಪದ ಹಿರೇಸರದಲ್ಲಿ ಇದ್ದಕ್ಕಿದ್ದಂತೆ ಕಾಳಿಂಗ ಸರ್ಪ ಎದುರಾಗಿದೆ. ಹಾವನ್ನು ಕಂಡು ಆತಂಕಗೊಂಡ ಚಾಲಕ, ಹಾವಿನ ಜೀವ ಉಳಿಸುವ ಧಾವಂತದಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ಭಾರೀ ಪ್ರಮಾಣದ ಅಡಿಕೆ ಲೋಡ್ ಹೊಂದಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. 

ಅದೇ ಸಮಯದಲ್ಲಿ ಕಾರ್ಯನಿಮಿತ್ತ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಮಾಜಿ ಸಚಿವರು ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಅಪಘಾತದ ತೀವ್ರತೆ ಕಂಡು ಆತಂಕಗೊಂಡಿದ್ದ ಲಾರಿ ಚಾಲಕನನ್ನು ಮಾತನಾಡಿಸಿದ ಶಾಸಕರು, ಅವರಿಗೆ ಯಾವುದೇ ಗಾಯಗಳಾಗದಿರುವುದನ್ನು ಖಚಿತಪಡಿಸಿಕೊಂಡು ಧೈರ್ಯ ತುಂಬಿದರು. 

ಅದೃಷ್ಟವಶಾತ್​​ ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

A lorry overturned while trying to rescue a python that crossed the road

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close