ಚುನಾವಣೆ ಭೂತ-ಜೆಡಿಎಸ್ ಗ್ರಾಮಾಂತರ ಮುಖಂಡರ ಸಭೆಯಲ್ಲಿ ಸತ್ಯ ಹೇಳಿದ ಸೋಮಿನಕೊಪ್ಪ ಕಾಂತರಾಜು-Election ghost - Sominakoppa Kantaraju told the truth at the JDS rural leaders' meeting

 SUDDILIVE || SHIVAMOGGA

ಚುನಾವಣೆ ಭೂತ-ಜೆಡಿಎಸ್ ಗ್ರಾಮಾಂತರ ಮುಖಂಡರ ಸಭೆಯಲ್ಲಿ ಸತ್ಯ ಹೇಳಿದ ಸೋಮಿನಕೊಪ್ಪ ಕಾಂತರಾಜು-Election ghost - Sominakoppa Kantaraju told the truth at the JDS rural leaders' meeting    

Election, Ghost

ಜಿಲ್ಲಾ ಜಾತ್ಯಾತೀತ ಜನತಾದಳದ ನೂತನ ಜಿಲ್ಲಾಧ್ಯಕ್ಷ ಕೆ.ಎನ್ ರಾಮಕೃಷ್ಣರವರ ಪದಗ್ರಹಣ ಸಮಾರಂಭ ಹಾಗೂ ಜಿಲ್ಲಾ, ತಾಲೂಕು ಮುಕಂಡರ ಸಭೆ ನಡೆದಿದೆ. ಸಭೆಯನ್ನ ಶಾಸಕಿ ಶಾರದಾ ಪೂರ್ಯನಾಯ್ಕ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸೋಮಿನಕೊಪ್ಪ ಕಾಂತರಾಜು ಅವರು ಖಡಕ್ ಸತ್ಯ ಹೇಳಿದರೆ ಉಳಿದವರೆಲ್ಲ ಕಾರ್ಯಕರ್ತರ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. 

ಜೆಡಿಎಸ್ ನ ಕಾರ್ಯಧ್ಯಕ್ಷ ಸೋಮಿನಕೊಪ್ಪ ಕಾಂತರಾಜು ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಹಬ್ಬಗಳಿಗೆ, ಟೂರ್ನಿಮೆಂಟ್ ಗಳಿಗೆ ಹಣ ನೀಡಿ ನಿರಾಸೆಯಾಗಿದ್ದಾರೆ. ಕಳೆದ ಏಳು ವರ್ಷದಿಂದ ಚುನಾವಣೆ ಬರ್ತಾಯಿಲ್ಲ. ಚುನಾವಣೆಯ ನಿರೀಕ್ಷೆಯಲ್ಲಿ ಟೂರ್ನಿಮೆಂಟ್ ಮತ್ತು ಪ್ರತಿಹಬ್ಬಕ್ಕೆ ಮುಖಂಡರು ಹಣಕೊಟ್ಟು ಖಾಲಿ ಮಾಡಿಕೊಂಡಿದ್ದಾರೆ. 

ಸಧ್ಯಕ್ಕೆ ಚುನಾವಣೆಗಳಿಲ್ಲ. 2028 ಕ್ಕೆ ಚುನಾವಣೆ, 2028 ರಲ್ಲಿ ಎನ್ ಡಿಎ ಸರ್ಕಾರ ಅಧಿಕಾರ ಬರುತ್ತೆ. ಶಾರದ ಪೂರ್ಯನಾಯ್ಕ್ ಗೆದ್ದು ಸಚಿವರಾಗುತ್ತಾರೆ.  ತಾಪಂ ಜಿಪಂ ಚುನಾವಣೆ ನಡೆಯುವುದು ಸುಳ್ಳು, ಗ್ರಾಪಂ ಚುನಾವಣೆ ಡಿಸೆಂಬರ್ ನಡೆಯಬಹುದು. ಎಲ್ಲರೂ ಒಟ್ಟಿಗೆ ಇರೋಣ ಕಾರ್ಯಕರ್ತರನ್ನ ಗೆಲ್ಲಿಸೋಣ. ಗ್ರಾಮಾಂತರ ಕಾರ್ಯಕರ್ತರನ್ನ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಮನವಿ ಮಾಡಿಕೊಂಡರು. 

ಮಾಜಿ ಅಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ರಾಮಕೃಷ್ಣ ಅವರು ಜಿಲ್ಲಾಧ್ಯಕ್ಷರಾದ ಮೇಲೆ‌ 7 ತಾಲೂಕಿನಲ್ಲಿ 6 ತಾಲೂಕಿಗೆ ಭೇಟಿ ನೀಡಿದ್ದಾರೆ. ಜಿಪಂ ತಾಪಂ ಗ್ರಾಪಂ ಚುನಾವಣೆಗೆ ಸಿದ್ದರಾಗಬೇಕಿದೆ. ಕೆಲ ಬೂತ್ ಗಳು ಗಟ್ಟಿಯಿವೆ. ಕೆಲ ಬೂತ್ ಗಳಲ್ಲಿ ಗಟ್ಟಿಯಿಲ್ಲ. ಬೂತ್ ಕಮಿಟಿಯನ್ನ ಗಟ್ಟಿ ಮಾಡಬೇಕು. ನಿಖಿಲ್ ಕುಮಾರ ಸ್ವಾಮಿ ಜೆಡಿಎಸ್ ನ ಬೆಳ್ಳಿ ಹಬ್ಬಕ್ಕೆ ಶಿವಮೊಗ್ಗಕ್ಕೆ ಬರ್ತಿದ್ದಾರೆ. ಡೇಟ್ ಕೊಟ್ಟಿಲ್ಲ. ನೋಡೋಣ ಎಂದರು. 

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಶಾಸಕಿಯರನ್ನ ಇಟ್ಟುಕೊಂಡು ಜಿಲ್ಲೆಯಲ್ಲಿ ಗಟ್ಟಿಗೊಳಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಓಡಾಡಿ ಪಕ್ಷ ಬಲವರ್ಧಿಸಬೇಕು. ಪಕ್ಷಕ್ಕೆ ಸದಸ್ಯರನ್ನ‌ ಕರೆತರಬೇಕು. ಪಕ್ಷ ಕಟ್ಟಲು ಈಗ ಸಂದರ್ಭವನ್ನ ಸರ್ಕಾರವೇ ತಂದುಕೊಟ್ಟಿದೆ. ಜನರ ಪರವಾಗಿ ಸರ್ಕಾರದ ವಿರುದ್ಧ ಹೋರಾಡಿ ಜನರ ವಿಶ್ವಾಸ ಗೆಲ್ಲಬೇಕು. ಬೂತ್ ಮಟ್ಟದಲ್ಲಿ ಪಕ್ಷ ಕಟ್ಟೋಣ. ಮುಂದೆ ಬರುವ ದಿನಗಳಲ್ಲಿ ಚುನಾವಣೆಗಳು ಸಾಲಾಗಿ ಬರುತ್ತೆ. ಯಾರಿಗೂ ಬಿಟ್ಟುಕೊಡದೆ ಗೆಲ್ಲೋಣ ಎಂದರು. 

ನೂತನ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಶಿವಮೊಗ್ಗ ಕ್ಷೇತ್ರ ಲಿಂಗಾಯಿತ ಪ್ರಾಬಲ್ಯದ ಕ್ಷೇತ್ರ. ಜೆಹೆಚ್ ಪಟೇಲರು ಸಿಎಂ ಆಗಿದ್ದಾಗ ಲಿಂಗಾಯಿತರು ಜನತಾಪರಿವಾರದ ಜೊತೆಯಿದ್ದರು. ಈಗ ಬಿಎಸ್ ವೈ ‌ಜೊತೆ ಹೋಗಿದ್ದಾರೆ. ಅದು ಅವರ ಆಯ್ಕೆ. ಗ್ರಾಮಾಂತರ ಭಾಗದಲ್ಒಇ ನಮ್ಮ ಪಕ್ಷದ ಬಾಯಕಿ ಶಾರದಾ ಪೂರ್ಯನಾಯ್ಕ್ ಕೈಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಬೂತ್ ಮಟ್ಟದ ವಿವರಣೆಯನ್ನ ಪಡೆದುಕೊಂಡು ಬೂತ್ ಮಟ್ಟದಿಂದ ಪಕ್ಷ ಬಲವರ್ಧಿಸೋಣ ಎಂದರು. 

Election ghost - Sominakoppa Kantaraju told the truth at the JDS rural leaders' meeting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close