SUDDILIVE || SHIVAMOGGA
ಶಿವಮೊಗ್ಗದಲ್ಲಿ ಸಿಡಿಲಬ್ಬರದ ಮಳೆ-Heavy rain in Shivamogga
ಬೇಸಿಗೆಯ ಮಳೆಯ ಅಬ್ಬರ ಜೋರಾಗಿದೆ. ಸಿಡಲಿಬ್ಬರದ ಮಳೆ ಸುರಿದಿದೆ. ಸಿಡಿಲು, ಗುಡುಗಿನಿಂದ ಮಳೆ ಆಋಭಟಿಸಿದೆ.
ಮೊದಲ ದಿನ ಆಲಿಕಲ್ಲು, ತದನಂತರ ಸಿಡಿಲಬ್ಬರದ ಮಳೆ, ಈಗ ಮತ್ತೆ ಸಿಡಿಲಬ್ಬರದ ಮಳೆಯಿಂದ ಧರೆ ತಂಪೆರೆದರೂ ಸೆಖೆ ಯ ಬೇಗುದಿ ತಣ್ಣಗಾಗುತ್ತಿಲ್ಲ. ಮಾರ್ಚ್ ತಿಂಗಳಲ್ಲೇ ಬೇಸಿಗೆ ಮಳೆ ಆರಂಭವಾಗಿದ್ದು ಇದು ಎಷ್ಟು ದಿನ ಮುಂದುವರೆಯಲಿದೆ ಕಾದು ನೋಡಬೇಕಿದೆ.
ಮಧ್ಯಾಹ್ನದ ಹೊತ್ತಿಗೆ 36-37 ಡಿಗ್ರಿ ಸೆಲ್ಷಿಯಸ್ ಡಿಗ್ರಿ ತಾಪಮಾನ ಶಿವಮೊಗ್ಗದಲ್ಲಿ ಕಂಡು ಬಂದಿತ್ತು. ಸಂಜೆಯ ನಂತರ ಬೇಸಿಗೆಯ ಮಳೆ ಸುರಿದಿದೆ. ನಗರದಲ್ಲಿ ಸುಮಾರು ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ.ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ತೆಗೆಯಲಾಗಿದೆ.
Heavy rain in Shivamogga


