SUDDILIVE || RIPPONPETE
ಊಟ ಮುಗಿಸಿ ಮಲಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ-A young man who was sleeping after finishing his meal was found hanging
ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ (village) ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಂದಿನಂತೆ ಕೆಲಸ ಮುಗಿಸಿಕೊಂಡು ಬುಧವಾರ ಮನೆಗೆ ಬಂದ ಯುವಕ, ರಾತ್ರಿ ಸಹೋದರರೊಂದಿಗೆ ಮಾತನಾಡಿ ಊಟ ಮುಗಿಸಿ ಮಲಗಲು ತೆರಳಿದ್ದಾನೆ.
ನಿನ್ನೆ ತಡರಾತ್ರಿ ಗಮನಿಸಿದಾಗ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮೃತರಿಗೆ ಅಪ್ಪ, ಅಮ್ಮ, ಅಣ್ಣ ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನನ್ನ ಸುನೀಲ್ (23) ಎಂದು ಗುರುತಿಸಲಾಗಿದೆ.
A young man who was sleeping after finishing his meal was found hanging

