SUDDILIVE || SHIVAMOGGA
ಆಗುಂಬೆ-ಅಡ್ಡಲಾಗಿ ಬಿದ್ದ ಮರ- Agumbe - a tree that has fallen sideways
ಆಗುಂಬೆ ಘಾಟಿಯಲ್ಲಿ ಮರವೊಂದು ಉರುಳಿ ಬಿದ್ದು ಟ್ರಾಫಿಕ್ ಜಾಮ್ ಆಗಿದೆ. ಘಾಟಿಯ ನಾಲ್ಕನೇ ಸುತ್ತಿನಲ್ಲಿ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದಿದೆ.
ಮರ ಉರುಳಿದ ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ. ತೀರ್ಥಹಳ್ಳಿ - ಉಡುಪಿ ಮಾರ್ಗದಲ್ಲಿ ಘಾಟಿಯ ಎರಡು ಕಡೆ ಟ್ರಾಫಿಕ್ ಜಾಮ್ ಆಗಿದೆ. ಮರ ರಸ್ತೆಗೆ ಬಿದ್ದಿರುವ ಪರಿಣಾಮ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಘಾಟಿಯಲ್ಲಿ ಸಂಚಾರ ಮಾಡುತ್ತಿದ್ದ ಲಾರಿ ಚಾಲಕರಿಂದ ಮರ ತೆರವಿಗೆ ಪ್ರಯತ್ನ ನಡೆದಿದೆ. ಒಂದು ಘಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ ಮೊನ್ನೆ ಬಿದ್ದ ಗಾಳಿ ಮಳೆಗೆ ಮರದ ಬುಡ ಸಡಿಲಗೊಂಡು ಇಂದು ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಎಂ ಮಾಹಿತಿ ಲಭ್ಯವಾಗಿದೆ. ಈಗ ಮರವನ್ನ ತೆರವುಗೊಳಿಸಲಾಗಿದೆ.
Agumbe - a tree that has fallen sideways

