ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿ 25 ಜನರ ಸಭೆ ನಡೆಸಿದ್ದು ಸರಿಯಿದೆ, ದಾವಣಗೆರೆ ದಕ್ಷಿಣ ಕ್ಷೇತ್ರ ನಮ್ದೆ-ಸಚಿವ ಮಧು ಬಂಗಾರಪ್ಪ-Davangere Dakshina Constituency Namde-Minister Madhu Bangarappa

SUDDILIVE || SHIVAMOGGA

ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿ 25 ಜನರ ಸಭೆ ನಡೆಸಿದ್ದು ಸರಿಯಿದೆ, ದಾವಣಗೆರೆ ದಕ್ಷಿಣ ಕ್ಷೇತ್ರ ನಮ್ದೆ-ಸಚಿವ ಮಧು ಬಂಗಾರಪ್ಪ-It is right that MLA Belur Gopalakrishna held a meeting of 25 people, Davangere Dakshina Constituency Namde-Minister Madhu Bangarappa

Madhu, Bangarappa

ಗ್ಯಾಸ್ ಟ್ರಬಲ್, ಜಿಲ್ಲೆಯಲ್ಲಿ ಕುಡಿಯುವ ನೀರು, ದಾವಣಗೆರೆಯ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ, ಬಜೆಟ್, ಕನ್ನಡ ಶಾಲೆಗಳಿಗೆ ಅನುದಾನ ಕುರಿತು ಇಂದು ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. 

ಸರ್ಕಾರ ಗ್ಯಾಸ್ ಕುರಿತು ಸದನದಲ್ಲಿ ಚರ್ಚೆ ನಡೆದಿದೆ. ರಾಜ್ಯದಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕಡೆ ಗ್ಯಾಸ್ ಡಿಸೇಲ್ ಪೆಟ್ರೋಲ್ ಲಭ್ಯತೆ ಇದೆ ಎಂದು ಅವರು ತಿಳಿಸಿದರು. 

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಧ್ಯಕ್ಕೆ ಜಿಲ್ಲೆಯಲ್ಲೂ ಗ್ಯಾಸ್ ಸಮಸ್ಯೆ ಕಂಡುಬರೊಲ್ಲ. ಈ ಕುರಿತು ಡಿಸಿಯವರ ಜೊತೆ ಗ್ಯಾಸ್, ಕುಡಿಯುವ ನೀರು ಕುರಿತಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬೇಸಿಗೆ ಪ್ರಾರಂಭವಾಗಿದ್ದು, ಈ ಕುರಿತು ಚರ್ಚೆ ನಡೆಸಲಾಗಿದೆ. ಈ ಕುರಿತು ನಾನು ಹಿಂದೆಯೇ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದೆನೆ ಎಂದರು. 

ಗ್ಯಾರಂಟಿ ಯೋಜನೆ ಸಫಲವಾಗಿ ನೀಡಲಾಗಿದೆ. ಕೆಲವರು ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಶಾಸಕ ಇಕ್ಬಾಲ್‌ನಂತವರಿಗೆ ಕೆಲಸ ಆಗಿಲ್ಲ. ಇಕ್ಬಾಲ್ ರವರ ಜೊತೆ ಪಕ್ಷದವರು ಚರ್ಚೆ ಮಾತನಾಡುತ್ತಾರೆ. ಕನ್ನಡ ಶಾಲೆ ನಮ್ಮ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಹೆಚ್ಚು ಮುಚ್ಚಿವೆ. ನಾನು ಅದರ ಬಗ್ಗೆ ಚರ್ಚೆ ನಡೆಸಲ್ಲ. ಕನ್ನಡ ಶಾಲೆಗಳಿಗೆ ಅನುದಾನ ಘೋಷಣೆ ಕುರಿತು ಈಗಲೂ ನನಗೆ ಭರವಸೆ ಇದೆ ಎಂದರು. 

ಬಜೆಟ್ ನಲ್ಲಿ ಘೋಷಣೆ ಆಗದೆ ಹೋದ್ರು‌ ಹೆಚ್ಚುವರಿ  ಬಜೆಟ್ ನಲ್ಲಿ ಅನುದಾನ ಸಿಗುವ ಭರವಸೆ ಇದೆ. ನನ್ನ ಇಲಾಖೆಯಲ್ಲಿ ಅದೇ ಒಂದೇ ಕೆಲಸ ಬಾಕಿ ಇದೆ. ಬಜೆಟ್ ಇನ್ನೂ ನಡೆಯುತ್ತಿದ್ದು, ಸಿಎಂ ರವರು ಅನುದಾನ ನೀಡುವ ಭರವಸೆ ಇದೆ ಎಂದರು. 

ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಕುರಿತು ನಾನು ಸಹ ಉಸ್ತುವಾರಿ ಇದ್ದೆನೆ. ಚುನಾವಣೆಗೆ ನೇಮಕವಾದ ಸಮಿತಿ ಒಂದು ಸಭೆ ನಡೆಸಲಾಗಿದೆ. ಮುಂದಿನ ವಾರ ಈ ಸಂಬಂಧ ಮತ್ತೊಂದು ಸಭೆ ನಡೆಸುತ್ತೆವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲುತ್ತೆವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಅಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಗೆಲ್ಲುತ್ತೆವೆ ಎಂದ ಮಧು ಬಂಗಾರಪ್ಪ, ನಿನ್ನೆ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 25 ಶಾಸಕರು ಸಭೆ ನಡೆಸಿದ್ದಾರೆ. ಈ ಮಾಹಿತಿ ನನಗೆ ತಿಳಿದಿದೆ. ಅವರು ಸಭೆ ನಡೆಸುವುದು ಒಳ್ಳೆಯ ಬೆಳವಣಿಗೆ, ಅವರಿಗೆ ಅವಕಾಶ ಸಿಗಬೇಕಿದೆ ಈ ಹಿನ್ನೆಲೆಯಲ್ಲಿ ಅವರು ಸಭೆ ನಡೆಸಿರುವುದು ತಪ್ಪಿಲ್ಲ ಎಂದರು. 

Davangere Dakshina Constituency Namde-Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close