SUDDILIVE || SHIVAMOGGA
ನಗರದಲ್ಲಿ ಹೋಟೆಲ್ ಬಂದ್, ಸಿಎನ್ ಜಿ ಗ್ಯಾಸ್ ಹೆಚ್ಚಳ ಆಟೋ ಚಾಲಕರ ಪರದಾಟ- Auto drivers suffer from CNG gas hike, hotel closures
ಇಸ್ರೇಲ್ - ಇರಾನ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ಬಿಸಿ ಕಾಣಿಸುತ್ತಿದೆ. ವಾಣಿಜ್ಯ ಸಿಲಿಂಡರ್ ಕೊರತೆಯ ಹಿನ್ನಲೆಯಲ್ಲಿ ನಗರದಲ್ಲಿರುವ ಹೋಟೆಲ್ ಬಂದ್ ಆದರೆ ಸಿಎನ್ ಜಿ ಆಟೋ ಚಾಲಕರ ಪರದಾಟ ಹೆಚ್ಚಾಗಿದೆ.
ದೇಶದಲ್ಲಿ ತೈಲ ಕೊರತೆಯ ಆತಂಕ ಶುರುವಾಗಿದ್ದು, ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರು ಹಾಗೂ ಆಟೋಚಾಲಕರು ಕಂಗಾಲಾಗಿದ್ದಾರೆ. ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಸಿಲಿಂಡರ್ ಗೆ 115 ರೂ. ನಷ್ಟು ಹೆಚ್ಚಳದ ಹಿನ್ನಲೆಯಲ್ಲಿ ಕೊರತೆ ಉಂಟಾಗಿದ್ದು ಕೆಲ ಹೋಟೆಲ್ ಗಳು ಗೃಹ ಬಳಕೆಸಿಲಿಂಡರ್ ಮೊರೆಹೋಗಿದ್ದಾರೆ. ಕೆಲ ಹೋಟೆಲ್ ಶಿವಮೊಗ್ಗದಲ್ಲಿ ಬಂದ್ ಆಗಿವೆ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ರಾಜಭವನ್ ಹೋಟೆಲ್ ಬಂದ್ ಆಗಿದೆ. ಕಳೆದ 2-3 ದಿನದಿಂದ ದರ ಏರಿಕೆ ಮಾಡಿರುವ ಗ್ಯಾಸ್ ಡೀಲರ್ಸ್ಈಗಾಗಲೇ ಹೋಟೆಲ್ ಮಾಲೀಕರ ಮೇಲೆ ಹೊರೆ ಆರಂಭವಾಗಿದೆ. ಗ್ಯಾಸ್ ದರ ಏರಿಕೆಯಾಯ್ತು ಎಂದು ನಾವು ಒಮ್ಮೆಲೆ ದರ ಏರಿಸಲು ಸಾಧ್ಯವಿಲ್ಲ.
ಗ್ಯಾಸ್ ಪೂರೈಕೆ ಆಗದಿದ್ರೇ ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ ಬರುತ್ತೆ ಎಂದು ಈ ಹಿಂದೆ ಮಾಲೀಕರ ಸಂಘ ತಿಳಿಸಿತ್ತು. ಎಲೆಕ್ಟ್ರಿಕ್ ಒಲೆ ಬಳಸಿ, ಎಲ್ಲಾ ಅಡುಗೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕೂಡಲೇ ಗ್ಯಾಸ್ ಗೆ ಸೂಕ್ತ ದರ ನಿಗಧಿ ಮಾಡಲಿ ಎಂದು ಒತ್ತಾಯಿಸಿದ್ದರು.
ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಗೋಪಿನಾಥ್ ಒತ್ತಾಯಿಸಿದ್ದರು. ಅವರ ಒತ್ತಾಯದ ಬೆನ್ನಲ್ಲೇ ನಗರದಲ್ಲಿ ರಾಜ್ ಭವನ್ ಹೊಟೆಲ್ ಬಂದ್ ಆಗಿದೆ.
ಅದರಂತೆ ಸಿಎನ್ ಜಿ ಗ್ಯಾಸ್ ಲೀಟರ್ ಗೆ 26 ರೂ ಏರಿಕೆಯಾಗಿದೆ. ಆಟೋ ಪ್ರಯಾಣಿಕರ ಬಳಿ ಹೆಚ್ಚಿನ ದರ ಕೇಳಲು ಸಾಧ್ಯವಾಗದೆ ಆಟೋ ಚಾಲಕರು ಪರದಾಡುತ್ತಿದ್ದಾರೆ. ಸಿಎನ್ ಜಿ ಲೀಟರ್ ಗೆ 56 ರೂ. ಇತ್ತು ಈಗ 82 ರೂ ಗೆ ಏರಿರುವುದು ಸಿಎನ್ ಜಿ ಆಟೋ ಚಾಲಕರು ಪರದಾಡುವಂತಾಗಿದೆ.
Auto drivers suffer from CNG gas hike, hotel closures

