SUDDILIVE || SHIVAMOGGA
ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿಯೇ ಉಸಿರು ಚೆಲ್ಲಿದ ಮೆಡಿಕಲ್ ಸ್ಟೂಡೆಂಟ್- Medical student dies on Meggan Hospital premises
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿಯೇ ನಡೆದ ರಸ್ತೆ ಅಪಘಾತದಲ್ಲಿ, ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ವಾಟರ್ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ಘಟನೆ ಮಧ್ಯಾಹ್ನ 1-35 ಕ್ಕೆ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯನ್ನು ಕಾರ್ಕಳ ಮೂಲದ ಲಾವಣ್ಯ (25) ಎಂದು ಗುರುತಿಸಲಾಗಿದೆ. ಇವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಜವೇರಿಯಾ ಎಂಬ ಮತ್ತೊಬ್ಬ ಯುವತಿಗೂ ಗಾಯಗಳಾಗಿವೆ. ಇವರು ಎಂಡಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸಧ್ಯಕ್ಕೆ ಔಟ್ ಆಫ್ ಡೇಂಜರ್ ಎಂದು ಹೇಳಲಾಗುತ್ತಿದೆ.
ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿಯೇ ಈ ದುರ್ಘಟನೆ ನಡೆದಿದೆ. ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಎದುರು ಈ ಘಟನೆ ನಡೆದಿದೆ. ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ಟ್ಯಾಂಕರ್ ಲಾರಿ ನೀರು ಪೂರೈಕೆ ಮಾಡಲು ಸಾಗುವಾಗ ಓವರ್ ಟೇಕ್ ಮಾಡಲು ಎಡಗಡೆಯಿಂದ ಬಲಭಾಗಕ್ಕೆ ಬಂದಿದ್ದಾನೆ.
ಎದುರಿನಿಂದ ಬಂದ ಲಾವಣ್ಯ ಸ್ಕಿಡ್ ಆಗಿ ಬಿದ್ದ ಪರಿಣಾಮ ಟ್ಯಾಂಕರ್ ಮೆಡಿಕಲ್ ವಿದ್ಯಾರ್ಥಿನಿಯ ತಲೆಯ ಮೇಲೆ ಹಿಂಬದಿಯ ಚಕ್ರ ಹರಿದಿದೆ. ಘಟನೆಗೆ ಸಂಬಂಧ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್ ಸ್ಟೂಡೆಂಟ್ ಗಳು ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲುತ್ತಿರುವುದು ಮೊದಲೇನಲ್ಲ.
ಐಬಿ ವೃತ್ತದ ಬಳಿ ಬೈಕ್ ನಲ್ಲಿ ಬರುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳು ಕೊನೆ ಉಸಿರು ಚೆಲ್ಲಿದ್ದರು. ಈಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸಂಭವಿಸಿದೆ.
Medical student dies on Meggan Hospital premises
