SUDDILIVE || SHIVAMOGGA
ಕದ್ದುಮುಚ್ಚಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸರ್ಕಾರ ಇಳಿದಿದೆಯಾ?Has the government secretly agreed to the Sharavati pumped storage project?
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತಂತೆ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಯ ಸದಸ್ಯರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಕೆಪಿಸಿ ಎಕ್ಸಿಕ್ಯೂಟಿವ್ ಅಧಿಕಾರಿಗಳು ಡಿಪಿಆರ್ ನೀಡುವಂತೆ ಕೋರಿದ್ದು, ಅಧಿಕಾರಿಗಳು ಮೇಲಿನ ಅಧಿಕಾರಿ ಬಂದ ನಂತರ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಕೆಂಡಮಂಡಲರಾದ ಮಾಜಿಡಿಸಿಎಂ ಇದು ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ ಈ ವಿಷಯದಲ್ಲಿ ನಿಮಗೆ ಛೀ ಮಾರಿ ಆಗಲಿದೆ. ಡಿಪಿಆರ್ ಇಲ್ಲದೆ ಯೋಜನೆ ಅನುಷ್ಠಾನಗೊಳಿಸಕಾಗುತ್ತಿದೆಯಾ ಎಂದು ಪ್ರಶ್ನಿಸಿದರು.
ಸ್ಥಳದಲ್ಲಿಯೇ ಕೆಪಿಸಿ ಮೇಲಧಿಕಾರಿ ಗಂಗಾಧರ್ ಅವರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿಲ್ಲ. ಯಾವಾಗ ಡಿಪಿಆರ್ ಕೊಡುವುದಾಗಿ ಸಂಜೆ ಒಳಗೆ ಕೊಡುವುದಾಗಿ ಮತ್ತೆ ಅಧಿಕಾರಿಗಳು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಪ್ರೊ.ಕುಮಾರ ಸ್ವಾಮಿ ಒಂದೇ ಪ್ಯಾರದಲ್ಲಿ ಉತ್ತರಿಸುವ ಹಾಗಿಲ್ಲ. ಪರಿಸರಾಸಕ್ತರ 42 ಪ್ರಶ್ನೆಗೆ ಉತ್ತರ ಬೇಕಿದೆ ಎಂಬ ಬೇಡಿಕೆಯಿಟ್ಟಿದ್ದಾರೆ.
ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ ಸಭೆ ನಡೆಯುವ ಮುಂಚೆನೆ ಮಾಹಿತಿ ಮೇಲಾಧಿಕಾರಿಗೆ ಮಾಹಿತಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು ಹಾಗಾಗಿ ಅಧಿಕಾರಿಗಳು ಶಿವಮೊಗ್ಗದಿಂದ ಬರುವ ಕರೆಗಳನ್ನಸ್ವೀಕರಿಸುತ್ತಿಲ್ಲ ಎಂದರು. ನಂತರ ಕೆಪಿಸಿಎಲ್ ಮುಖ್ಯ ಅಧಿಕಾರಿಗೆ ಈಶ್ವರಪ್ಪನವರು ಮತ್ತೆ ಮೊಬೈಲ್ ಕರೆ ಮಾಡಿದರು. ಆ ಕಡೆಯಿಂದ ಕರೆ ಸ್ವೀಕರಿಸಿದ ಅಧಿಕಾರಿಗಳು ಯಾರಿಗೂ ಮಾಹಿತಿ ಕೊಡಬೇಡಿ ಎಂದು ಎಂಡಿಯವರು ಹೇಳಿದ್ದಾರೆ. ಯಾರಿಗೂ ಮಾಹಿತಿ ಹಂಚಿಕೊಳ್ಳಬೇಡಿ ಎಂದರು. ಇದಕ್ಕೆ ಮತ್ತೆ ಪ್ರಶ್ನಿಸಿದ ಈಶ್ವರಪ್ಪ ಯಾರು ಮಾತನಾಡಿತ್ತಿರುವುದು ಎನ್ನುತ್ತಿದ್ದಂತೆ ಕರೆ ಕಟ್ ಮಾಡಲಾಗಿದೆ.
ಇದರಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತು ಕೆಪಿಸಿ ಅಧಿಕಾರಿಗಳು ಒತ್ತಡದಲ್ಲಿರುವುದು ಕಂಡು ಬಂದಿದೆ. ಯೋಜನೆಯು ಗುಪ್ತವಾಗಿ ನಡೆಯಲಿದೆ ಎಂಬ ಅನುಮಾನಕ್ಕೂ ಈ ಯೋಜನೆ ಎಡೆಮಾಡಿಕೊಟ್ಟಿದೆ. ಕಾರಣ ಇಂಧನ ಸಚಿವ ಕೆ.ಜೆ ಜಾರ್ಜ್ ವಿಧಾನ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ನಿಂದ ಪರಿಸರಕ್ಕೂ ಹಾನಿಯಾಗಲ್ಲ. ಎಲ್ಲವೂ ಅಂಡರ್ ಗ್ರೌಂಡ್ ನಲ್ಲಿ ನಡೆಯಲಿದೆ. ಈಗ ಕಡಿದ ಮರಗಳು ಪುನಃ ಬೆಳೆಯುತ್ತವೆ ಎಂಬ ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳು ಡಿಪಿಆರ್ ನೀಡಲು ಗುಪ್ತ ಗುಪ್ತವಾಗಿ ಆಡುತ್ತಿರುವುದು ಸರ್ಕಾರ ಕದ್ದುಮುಚ್ಚಿ ಈ ಯೋಜನೆಗೆ ಇಳಿದಿರುವುದು ಸ್ಪಷ್ಟವಾಗಿದೆ.
ಡಿಸಿ ಪ್ರಭುಲಿಂಗ ಕವಳಕಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರಭಕ್ತರ ಬಳದ ಕೆ.ಈ.ಕಾಂತೇಶ್, ಪರಿಸರಕ್ಕಾಗಿ ನಾವು ಸಂಘಟನೆಯ ಶ್ರೀಪತಿ, ಪ್ರೊ.ಕುಮಾರಸ್ವಾಮಿ, ಪೈಗಳು, ನಾಗೇಶ್ ಮೊದಲಾದವರು ಭಾಗಿಯಾಗಿದ್ದರು.
Has the government secretly agreed to the Sharavati pumped storage project?
