SUDDILIVE || BHADRAVATHI
ನಂಬರ್ ಪ್ಲೇಟ್ ಇಲ್ಲದ ಆಟೋ ಮತ್ತು ಪಾದಚಾರಿಗೆ ಡಿಕ್ಕಿ-Auto without number plate collides with pedestrian
ಭದ್ರಾವತಿಯಲ್ಲಿ ನಿನ್ನೆ ರಾತ್ರಿ ಅಪರಿಚಿತ ಆಟೋವೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಆತನ ಬಲಗಾಲು ಮುರಿದು ಹೋಗಿದೆ. ಆತನಿಗಾಗಿ ಹುಡುಕಾಟ ಜೋರಾಗಿದೆ.
ನಿನ್ನೆ ರಾತ್ರಿ ಭದ್ರಾವತಿಯ ಅಂಡರ್ ಬ್ರಿಡ್ಜ್ ಬಳಿ ಪಾದಚಾರಿ ವೆಂಕಟ ನಾರಾಯಣ ರೆಡ್ಡಿ ಎಂಬ 36 ವರ್ಷದ ಕೂಲಿಕಾರ್ಮಿಕ ಎಗ್ ರೈಸ್ ತಿಂದು ರಸ್ತೆ ದಾಡುವಾಗ ನಂಬರ್ ಪ್ಲೇಟ್ ಇಲ್ಲದ ಆಟೋ ವೊಂದು ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ವೆಂಕಟ ನಾರಾಯಣ ರೆಡ್ಡಿ ಬಲಗಾಲು ಮುರಿದಿದೆ.
ಪ್ಲಾಸರ್ ಹಾಕಿದರೂ ಸಹ ಮೂಳೆ ಹೆಚ್ಚಿನ ರೀತಿಯಲ್ಲಿ ಹಾನಿಯಾಗಿರುವುದರಿಂದ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಇತ್ತ ನಂಬರ್ ಪ್ಲೇಟ್ ಇಲ್ಲದೆ ಬಂದ ಆಟೋ ಡಿಕ್ಕಿ ಪಡಿಸಿದ್ದರಿಂದ ಪೊಲೀಸ್ ಇಲಾಖೆ ಆಟೋ ಪತ್ತೆಹಚ್ಚುವಲ್ಲಿ ಮಗ್ನವಾಗಿದೆ.
ಯಾವ ಸಿಸಿ ಟಿವಿ ಫೂಟೇಜ್ ತಪಾಸಣೆಗೊಳಿಸಿದರೂ ಸಹ ನಂಬರ್ ಪ್ಲೇಟ್ ಇಲ್ಲದೆ ಇರುವುರಿಂದ ಆತನ ಗುರುತು ಪತ್ತೆಯಾಗುತ್ತಿಲ್ಲ. ಒಂದು ವೇಳೆ ಸೇಡಿನಲ್ಲಿ ಈ ರೀತಿ ಬಂದು ಅಪಘಾತ ಪಡಿಸಿದರೆ ದೇವರೇ ಕಾಪಾಡುವಂತಾಗಿದೆ. ಯಾವ ತಂತ್ರಜ್ಞಾನವು ಕೆಲ ನೂನ್ಯತೆಗಳಿಗೆ ತಲೆ ಬಾಗಬೇಕಾಗುವ ಸ್ಥಿತಿ ತಲುಪಿದೆ.
ಕೂಲಿ ಮಾಡಿ ಬದುಕುತ್ತಿದ್ದ ವೆಂಕಟ ನಾರಾಯಣ ರೆಡ್ಡಿ ಕಾಲುಮುರಿದುಕೊಂಡು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Auto without number plate collides with pedestrian


