SUDDILIVE || RIPPONPETE
ಚಲಿಸುತಿದ್ದ ಬೈಕ್ ಗೆ ಜಿಂಕೆ ಅಡ್ಡ ಬಂದು ಅಪಘಾತ - ಸವಾರನಿಗೆ ಗಂಭೀರ ಗಾಯ-A deer ran into a moving bike and caused an accident - the rider was seriously injured
ಜಿಂಕೆಯೊಂದು ಏಕಾಏಕಿ ದ್ವಿಚಕ್ರ ವಾಹನದ ಮುಂದೆ ಅಡ್ಡ ಬಂದ ಪರಿಣಾಮ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ವರಾನಹೊಂಡ ಬಳಿಯಲ್ಲಿ ನಡೆದಿದೆ.
ತಳಲೆ ಗ್ರಾಮದ ನಾಗರಾಜ್ (33) ಗಾಯಗೊಂಡ ವ್ಯಕ್ತಿಯಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ನಾಗರಾಜ್ ಅವರು ಇಂದು ಬೆಳಿಗ್ಗೆ ಕಬ್ಬು ಕಡಿಯುವ ಕೆಲಸಕ್ಕಾಗಿ ವಡಗೆರೆ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ವರಾನಹೊಂಡದ ಭೂತರಾಯನ ದೇವಸ್ಥಾನದ ಸಮೀಪದಲ್ಲಿ ಜಿಂಕೆಯೊಂದು ಏಕಾಏಕಿ ರಸ್ತೆಗೆ ಹಾರಿದ ಹಿನ್ನೆಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಸವಾರನ ತಲೆಗೆ ಗಂಭೀರ ಗಾಯವಾಗಿದೆ.
ಅಪಘಾತದ ಬಳಿಕ ಸ್ಥಳೀಯರು ಗಾಯಾಳುವನ್ನು ತಕ್ಷಣವೇ ರಿಪ್ಪನ್ ಪೇಟೆ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ರವಾನಿಸಿದ್ದಾರೆ.
ಇದೇ ವೇಳೆ, ಆಂಬುಲೆನ್ಸ್ ಸಂಪರ್ಕ ಸಿಗದ ಹಿನ್ನೆಲೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
A deer ran into a moving bike and caused an accident - the rider was seriously injured

