SUDDILIVE || BHADRAVATHI
ಭದ್ರಾವತಿ-ಮನೆಕಳ್ಳತನದ ಆರೋಪಿ ಬಂಧನ-Bhadravati-House burglary accused arrested
ಮನೆಕಳ್ಳತನ ನಡೆಸಿದ ಆರೋಪಿಯನ್ನ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಸೌಭಾಗ್ಯ ಕೋಂ ಜೀವರತ್ನಂ, 48 ವರ್ಷ, ನಗರ ಸಭೆಯಲ್ಲಿ ಕೆಲಸ, ವಾಸ ಎನ್.ಟಿ.ಬಿ ಆಪೀಸ್ ಹತ್ತಿರ ಜನ್ನಾಪುರ ಭದ್ರಾವತಿ ರವರು ದಿನಾಂಕ:20-11-2025 ರಂದು ಠಾಣೆಗೆ ಹಾಜರಾಗಿ, ದಿನಾಂಕ:19-11-2025 ರಂದು ಬೆಳಿಗ್ಗೆ 5:30 ಗಂಟೆಯಿಂದ ಬೆಳಿಗ್ಗೆ 10:00 ಗಂಟೆಯ ಮದ್ಯದ ಅವಧಿಯಲ್ಲಿ ಭದ್ರಾವತಿ ಟೌನ್ ಜನ್ನಾಫುರದಲ್ಲಿರುವ ಮನೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ ಇಟ್ಟಿದ್ದ ಸುಮಾರು 10 ಗ್ರಾಂ ತೂಕದ 1,00,000/- ರೂ.ಬೆಲೆಯ ಬಂಗಾರದ ಸರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಪಿರ್ಯಾದುದಾರರ ಮನೆಯಲ್ಲಿಟ್ಟಿದ್ದ ಬಂಗಾರದ ಸರವನ್ನು ತೆಗೆದುಕೊಂಡು ಹೋದ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ನಿಖಿಲ್.ಬಿ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಎ.ಜಿ.ಕಾರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ರಮೇಶ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ, ಪ್ರಕಾಶ್ ರಾಥೋಡ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ ರವರ ಹಾಗೂ ಶ್ರೀಮತಿ ಕೆ.ನಾಗಮ್ಮ. ಸಿ.ಪಿ.ಐ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ ರಮೇಶ್.ಟಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನ್ಯೂಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ ಕವಿತಾ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 374 ನವೀನ್.ಟಿ, ಹೆಚ್.ಸಿ 408 ಆದರ್ಶ.ಆರ್, ಸಿ.ಪಿ.ಸಿ 1514 ಪ್ರಕಾಶ.ಜಿ.ಕೆ, ಸಿ.ಪಿ.ಸಿ 1675 ಪ್ರಸನ್ನ.ಹೆಚ್ ರವರನ್ನೊಳಗೊಂಡ ವಿಷೇಶ ತಂಡವನ್ನು ರಚನೆ ಮಾಡಿದ್ದು ಸದರಿ ತಂಡ ಮೇಲಾಧಿಕಾರಿಗಳ ಮಾರ್ಗಸೂಚನೆಗಳಂತೆ ಆರೋಪಿತನಾದ 1) ಸೂರ್ಯ.ಎಂ ತಂದೆ ಮೋಹನ್, 28 ವರ್ಷ, ಝೆಪ್ಟೋ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ, ವಾಸ ಮನೆ ನಂ:07 ಸಂಜೀವಪುರಂ ವನ್ನಾರ್ ಪೇಟ್ ವಿವೇಕನಗರ ಬೆಂಗಳೂರು ನಗರ ಈತನನ್ನು ಪತ್ತೆ ಮಾಡಿ ಸದರಿ ಆರೋಪಿತನಿಂದ 1) ಕಳ್ಳತನ ಮಾಡಿದ 10 ಗ್ರಾಂ ತೂಕದ ಬಂಗಾರದ ಸರ ಅಂದಾಜು ಮೌಲ್ಯ 1,40,000/- ರೂ. ಅಮಾನತ್ತು ಪಡಿಸಿರುತ್ತದೆ.
ನಿಖಿಲ್.ಬಿ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಧಿಕಾರಿ ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.
Bhadravati-House burglary accused arrested
