25 ಜನರಿಗೆ ಕೋಕ್ಲಿಯರ್ ಶಸ್ತ್ರ ಚಿಕಿತ್ಸೆಯನ್ನ ಮೆಗ್ಗಾನ್ ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ- Cochlear surgery for 25 people successful in Meggan

 SUDDILIVE || SHIVAMOGGA

25 ಜನರಿಗೆ ಕೋಕ್ಲಿಯರ್ ಶಸ್ತ್ರ ಚಿಕಿತ್ಸೆಯನ್ನ ಮೆಗ್ಗಾನ್ ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ- Cochlear surgery for 25 people successful in Meggan            

Coclear, surgery

ಶ್ರವಣ ಸಂಜೀವಿನಿ ಕೋಕ್ಲಿಯರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನ ಇ ಅಂಡ್ ಟಿ ವಿಭಾಗ ಯಶಸ್ವಿ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ನಡೆಸಿದೆ.‌

ಈ ಯೋಜನೆ ಅಡಿ ಮೆಕಾನ್ ಜಿಲ್ಲಾ ಆಸ್ಪತ್ರೆಯಲ್ಲಿ 2023‌ಕ್ಕೆ ಮಾರ್ಚ್ 1ರಂದು ಮೊದಲ ಇಂಪ್ಲಾಂಟ್ ಶತ್ರು ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಈ ಎರಡು ವರ್ಷದಲ್ಲಿ ಇದುವರೆಗೆ ಆಸ್ಪತ್ರೆಯಲ್ಲಿ 25ನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಇ ಅಂಟಿ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಯೋಜನೆ ಗಂಭೀರದಿಂದ ಅತ್ಯಂತ ಗಂಭೀರವಾದ ಕವನ ಸಮಸ್ಯೆಯನ್ನು ಬೇಗ ಗುರುತಿಸುವುದು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡುವುದು ಮೊದಲಿಗೆ ಹಿರಿಂಗ್ ಏಜ್ ಮೂಲಕ ಟ್ರಯಲ್ ತೆರಪಿ ನೀಡುವುದು ಅಗತ್ಯವಿದ್ದರೆ ಕೋಕ್ಲಿಯರ ಶಸ್ತ್ರ ಚಿಕಿತ್ಸೆ ನಡೆಸುವುದು. ಶಸ್ತ್ರ ಚಿಕಿತ್ಸೆಯ ನಂತರ 2 ವರ್ಷಗಳ ಕಾಲ ಪುನರ್ ವಸತಿ ನೀಡುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

ಟಿಪ್ಪುನಗರದ ವಾಸಿ ಧಾನಿಯಾ ಫಾತಿಮಾ ಎಂಬ 4 ವರ್ಷದ ಮಗುವಿಗೆ ಮತ್ತು ಶಾರವರಿಯಾ ಎಂಬ 6 ವರ್ಷದ ಮಗುವಿಗೆ ಕೋಕ್ಲಿಯರ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಎರಡೂ ಮಕ್ಕಳಿಗೆ ಎರಡೂ ಕಿವಿ ಕೇಳುತ್ತಿರಲಿಲ್ಲ. ಒಂದು ಕಿವಿ ಆಪರೇಷನ್ ಗೆ 12-15 ಲಕ್ಷ ರೂ ವೆಚ್ಚ ತಗುಲಿದ್ದು ಇದನ್ನ ಉಚಿತವಾಗಿ ನೀಡಲಾಗಿದೆ. ಈ ಉಚಿತ ಸೇವೆಗೆ ಮಗುವಿನ ಎರಡೂ ಕಿವಿ ಕೇಳದಂತಿದ್ದವರಿಗೆ ಸೌಲಭ್ಯ ಸಿಗಲಿದೆ. 

ಡಾ.ಶ್ರೀಧರ್ ಮಾತನಾಡಿ, ಇದುವರೆಗೂ 25 ಮಕ್ಕಳಿಗೆ ಚಿಕಿತ್ಸೆ ನಡೆಸಲಾಗಿದೆ. 25 ಮಕ್ಕಳು ಹುಟ್ಟು ಕಿವುಡಾಗಿದ್ದಾರೆ. ಸರ್ಕಾರ ಎಪಿಎಲ್ ಮತ್ತು ಬಿಪಿಎಲ್  ಕಾರ್ಡ್ ಎರಡು ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ  7-50ಲಕ್ಷ ರೂ. ಮಿಷನ್ ನೀಡಿ ಆಶಾಕಾರ್ಯಕರ್ತರು ಗುರುತಿಸುತ್ತಾರೆ. ಕಾಕ್ಲಿಯರ್ ಇಂಪ್ಲಾಂಟ್ ಎರಡು ವರ್ಷದಲ್ಲಿದ್ದಾಗಲೇ ಮಕ್ಕಳು ಶಸ್ತ್ರಚಿಕಿತ್ಸೆಗೆ ಬರಬೇಕು ಎಂದರು. 

ಎರಡು ವರ್ಷ ದಾಟಿದರೆ ಕಮಿಟಿ ರಚಿಸಿದ್ದು ಅವರಿಂದ ಅನುಮತಿ ಪಡೆಯಬೇಕಿದೆ. ಹುಟ್ಟಿದ ಮಗುವಿಗೆ ಯಾವಾಗ ಕಿವಿ ಕೇಳಿಸೊಲ್ಲವೋ ಎಲ್ಲಾರೀತಿಯ ಮಕ್ಕಳಿಗೆ ಉಚಿತ ಸೇವೆ ಸಿಗಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಕೋರಿದರು.

Cochlear surgery for 25 people successful in Meggan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close