ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನ: ಶ್ರೀ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸರ್ವಾಧ್ಯಕ್ಷರು- Shivamogga District 7th Sharan Sahitya Sammelan: Dr. Mallikarjuna Murugarajendra Swami of Sri Bekkinakal Math is the presiding officer

SUDDILIVE || SHIVAMOGGA

ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನ: ಶ್ರೀ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸರ್ವಾಧ್ಯಕ್ಷರು- Shivamogga District 7th Sharan Sahitya Sammelan: Dr. Mallikarjuna Murugarajendra Swami of Sri Bekkinakal Math is the presiding officer    

Sharana, sahithya


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಮಾರ್ಚ್ 24 ಮತ್ತು 25, 2026ರಂದು ನಗರದ ಕುವೆಂಪು ರಂಗಮಂದಿರದಲ್ಲಿ 7ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. "ಇಂದಿನ ಸವಾಲುಗಳು – ವಚನಗಳಲ್ಲಿ ಉತ್ತರ" ಎನ್ನುವ ಚಿಂತನೆಯನ್ನು ಇಟ್ಟುಕೊಂಡಿರುವ ಈ ಸಮ್ಮೇಳನಕ್ಕೆ ಆನಂದಪುರಂ ಹಾಗೂ ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸರ್ವಾಧ್ಯಕ್ಷರಾಗಲಿದ್ದಾರೆ.

1951 ರಲ್ಲಿ ಜನಿಸಿದ ಶ್ರೀಗಳು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದು, ಸಮಾಜ ಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಇವರ ಅಪಾರ ಸಾಧನೆಯನ್ನು ಗುರುತಿಸಿ ಕುವೆಂಪು ವಿಶ್ವವಿದ್ಯಾಲಯವು 2013 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಪೂಜ್ಯ ಶ್ರೀಗಳು ಕೇವಲ ಆಧ್ಯಾತ್ಮಿಕ ಗುರುಗಳಲ್ಲದೆ, ಸಮಾಜದ ವಿವಿಧ ಸ್ತರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಮದ್ಯಪಾನ ನಿಷೇಧ ಆಂದೋಲನ ಸಮಿತಿಯ ಗೌರವಾಧ್ಯಕ್ಷರಾಗಿ, ಇತಿಹಾಸ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅನನ್ಯವಾಗಿದ್ದು, 1980 ರಲ್ಲಿ ಸ್ಥಾಪಿಸಿದ ಶ್ರೀ ಗುರುಬಸವೇಶ್ವರ ವಿದ್ಯಾಪೀಠದ ಮೂಲಕ ಸುಮಾರು 25 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ. ಅಲ್ಲದೆ, 'ಗುರುಬಸವ ಅಧ್ಯಯನ ಪೀಠ'ದ ಮೂಲಕ ಸುಮಾರು 30 ಮಹತ್ವದ ಕೃತಿಗಳನ್ನು ಪ್ರಕಟಿಸಿ ಶರಣ ಸಾಹಿತ್ಯದ ಪ್ರಸಾರಕ್ಕೆ ಒತ್ತು ನೀಡಿದ್ದಾರೆ. ನಾಡಿನ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಪರಂಪರೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು, ಅನೇಕ ಸಾಹಿತಿಗಳು, ಬರಹಗಾರರು, ಶಿಕ್ಷಕರು, ಸಾಹಿತಿಗಳು, ಹಾಗೂ ವಿವಿಧ ಕ್ಷೇತ್ರದ ಗಣ್ಯರನ್ನು  ಪ್ರಭಾವಿಸಿದ್ದಾರೆ. 2001 ರ ಗುಜರಾತ್ ಭೂಕಂಪದ ಸಂದರ್ಭದಲ್ಲಿ 51 ಲಕ್ಷ ರೂ.ಗಳ ಬೃಹತ್ ನಿಧಿ ಸಂಗ್ರಹಿಸಿ ಮಾನವೀಯತೆ ಮೆರೆದ ಇವರ ನೇತೃತ್ವದಲ್ಲಿ ಈ ಬಾರಿಯ ಸಮ್ಮೇಳನ ಜರುಗುತ್ತಿರುವುದು ಸಾಹಿತ್ಯಾಸಕ್ತರಲ್ಲಿ ಸಂತಸ ತಂದಿದೆ.

Shivamogga District 7th Sharan Sahitya Sammelan: Dr. Mallikarjuna Murugarajendra Swami of Sri Bekkinakal Math is the presiding officer  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close