SUDDILIVE || BHADRAVATHI
ಭದ್ರಾವತಿಯ ಕಾಗೇಹಳ್ಳದಲ್ಲಿ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್- Bus falls from bridge into ravine in Kagehalla, Bhadravati
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಹಳ್ಳಕ್ಕೆ ಉರುಳಿದೆ. ಚಲಿಸುತ್ತಿದ್ದ ಬಸ್ ಖಾಸಗಿ ಬಸ್ ದಾವಣಗೆರೆಯಿಂದ ಭದ್ರಾವತಿಗೆ ಬರುವಾಗ ಈ ಘಟನೆ ಸಂಭವಿಸಿದ್ದು, ಇಂದು ಮಧ್ಯಾಹ್ನ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಭದ್ರವತಿ ತಾಲೂಕಿನ ಕಾಗೆಹಳ್ಳ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದಾವಣಗೆರೆಯಿಂದ ಚನ್ನಗಿರಿ ಮೂಲಕ ಭದ್ರಾವತಿಗೆ ಬರುತ್ತಿದ್ದ ಶ್ರೀ ಗುರುರೇಣುಕಾಂಬ ಖಾಸಗಿ ಬಸ್ ಕಾಗೆಳ್ಳದ ಬಳಿ ಹಳ್ಳಕ್ಕೆ ಬಿದ್ದಿದೆ.
ಬಸ್ ನಲ್ಲಿ ಇದ್ದ ಮೂವತ್ತು ಜನಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ಹಲವರಿಗೆ ಗಾಭೀರಗಾಯ ಭದ್ರವತಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ. ಬಸ್ ಡ್ರೈವರ್ ಪ್ರಸಾದ್ ನ ನಿರ್ಲಕ್ಷದಿಂದ ಬಸ್ ಹಳ್ಳಕ್ಕೆ ಉರುಳಿದೆ ಎಂಬ ಪ್ರಾಥಮಿಕಮಾಹಿತಿ ಲಭ್ಯವಾಗಿದೆ.
ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರಯಾಣಿಕರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಗೆ ಸಾಗಿಸಲಾಗಿದೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಸಂಭವಿಸಿದೆ.
Bus falls from bridge into ravine in Kagehalla, Bhadravati

