SUDDILIVE || SHIVAMOGGA
ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನ ರಕ್ಷಣೆ – ಪೊಲೀಸರ ಮಾನವೀಯ ಸ್ಪಂದನೆ-Rescue of a boy who attempted suicide by jumping off a bridge – Humane response from the police
ತಂದೆ ತಾಯಿ ನಿರ್ಲಕ್ಷಿಸುತ್ತಿದ್ದಾರೆ ಎಙದು ಭಾವಿಸಿ ಸೇತುವೆಯಿಙದ ತುಂಗ ನದಿಗೆ ಹಾರಲು ಹೋದ 16 ವರ್ಷದ ಬಾಲಕನನ್ನ ಇಆರ್ ಎಸ್ ಪೊಲೀಸರು ರಕ್ಷಿಸಿದ್ದಾರೆ.
ಶಿವಮೊಗ್ಗದ ಊರಗಡೂರಿನ 16 ವರ್ಷದ ಬಾಲಕನೊಬ್ಬನೊಬ್ಬ ಕುಟುಂಬದಲ್ಲಿ ತಂದೆ-ತಾಯಿಗಳು ಅಣ್ಣ ತಮಂದಿರ ನಡುವೆ ಬೇಧಭಾವ ತೋರಿಸುತ್ತಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದನು.
ಮಾರ್ಚ್ 27ರಂದು ರಾತ್ರಿ ಗಸ್ತಿನಲ್ಲಿ ತೊಡಗಿದ್ದ ERSS ವಾಹನದ ಸಿಬ್ಬಂದಿಗಳಿಗೆ ಸಾರ್ವಜನಿಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ERV ರೆಸ್ಪಾಂಡರ್ ಶಬ್ಬೀರ್ ಬೇಗ್ (ಸಿ.ಹೆಚ್.ಸಿ, ತುಂಗಾನಗರ ಪೊಲೀಸ್ ಠಾಣೆ) ಹಾಗೂ ಚಾಲಕರಾದ ಮಂಜುನಾಥ್ (ಎ.ಹೆಚ್.ಸಿ, ಡಿಎಆರ್, ಶಿವಮೊಗ್ಗ) ಅವರು ಸಾರ್ವಜನಿಕರ ಸಹಕಾರದೊಂದಿಗೆ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದರು.
ನಂತರ ಬಾಲಕನಿಗೆ ಮನವೊಲಿಸಿ, ಇಂತಹ ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಸೂಕ್ತ ತಿಳುವಳಿಕೆ ನೀಡಿದರು. ಬಳಿಕ ಪೋಷಕರನ್ನು ಕರೆಸಿ, ಬಾಲಕನನ್ನು ಅವರ ಜವಾಬ್ದಾರಿಯಲ್ಲಿ ಮನೆಗೆ ಕಳುಹಿಸಿದರು.

