SUDDILIVE || SHIVAMOGGA
ಒಳಮೀಸಲಾತಿಯನ್ನ ಕ್ಲಸ್ಟರ್ ರೂಪದಲ್ಲಿ ಹಂಚುವಂತೆ ಛಲವಾದಿ ಸಮುದಾಯ ಆಗ್ರಹ- Chalavadi community demands distribution of internal reservation in cluster form
ಪರಿಶಿಷ್ಟ ಜಾತಿಯ ಬಲಗೈ ಸಮಾಜದ ಛಲವಾದಿ ಮತ್ತು ಮಾದಿಗ ವಲಯ ಸಮುದಾಯಕ್ಕೆ ಸೂಕ್ತ ರೀತಿಯಲ್ಲಿ ಒಳಮೀಸಲಾತಿ ನೀಡುವಂತೆ ಆಗ್ರಹಿಸಲಾಗಿದೆ. ಈ ಕುರಿತು ಛಕವಾದಿ ಸಮಾಜ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಮಾದಿಗ ಮಹಾಸಭಾದ ಬಿಡಿ ಸಾವೊಕ್ಕನವರ್, ಸರ್ಕಾರ ಬ್ಯಾಕ್ ಲಾಗ್ ಹುದ್ದೆಯನ್ನ ತುಂಬಲಿಲ್ಲ. ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಜಾತಿಗಳಿಗೆ 17% ಹೆಚ್ಚಿಸಿ ಸರ್ಕಾರ ಆದೇಶಿಸಿತ್ತು. ಕೋರ್ಟ್ ಇದನ್ನ ತಡೆದು 50% ಹೆಚ್ಚಿಸಬಾರದು ಎಂದ ಕಾರಣ 15% ನಲ್ಲಿಯೇ ಮೂರು ವಿಭಾಗದಲ್ಲಿ ಹಂಚಲಾಯಿತು. ಹಿಂದಿನ ಸರ್ಕಾರ 17% ಹೆಚ್ಚಿಸಿದ್ದನ್ನ ರಾಷ್ಟ್ರಪತಿ ಅನುಮೋದನೆ ಪಡೆಯದೆ ಬಿದ್ದು ಹೋಗಿದೆ ಎಂದರು.
15% ರಲ್ಲಿ 5-6% ಮೀಸಲಾತಿಯನ್ನ ಛಲವಾದಿ ಮತ್ತು ಮಾದಿಗರ ಸಮಾಜಕ್ಕೆ ನೀಡಬೇಕು. ಉದ್ದೇಶಪೂರಕವಾಗಿ ಬಿ ಗ್ರೂಪ್ ಗೆ ಛಲವಾದಿ ಮತ್ತು ಮಾದಿಗರಿಗೆ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಕ್ಲಸ್ಟರ್ ರೀತಿಯಲ್ಲಿ ಹಂಚಬೇಕು. ಗುಂಪುಗಳಾಗಿ ಹಂಚಿದಾಗ ನಮ್ಮ ಹಾಗೂ ಒಡನಾಡಿ ಸಮುದಾಯಕ್ಕೆ ನ್ಯಾಯ ಸಿಗಲಿದೆ. ಈಗ ಜಾತಿಗಳನ್ನ ಬಿಂದುಗಳನ್ನಾಗಿ ರೂಪಿಸಿ ಮೀಸಲಾತಿ ಹಂಚಬಾರದು ಎಂದು ಆಗ್ರಹಿಸಿದರು.
A ಗ್ರೂಪ್ ನಲ್ಲಿ 16 ಗ್ರೂಪ್ ಇವೆ. B ಗ್ರೂಪ್ ನಲ್ಲಿ 19 ಜನರಿದ್ದಾರೆ. ಈ ವರದಿಯನ್ನ ತಿರಸ್ಕರಿಸಬೇಕಿದೆ. ರಾಜಕೀಯ ಕುತಂತ್ರ ಬಂದ್ ಆಗಬೇಕಿದೆ ಒಳಮೀಸಲಾತಿ ಕುರಿತು ಮಾ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 5 ಲಕ್ಷ ಜನರನ್ನ ಒಗ್ಗೂಡಿಸಿ ಪ್ರತಿಭಟಿಸಲಾಗುತ್ತಿದೆ. ಶಿವಮೊಗ್ಗದಿಂದ 100 ಜನ ಭಾಗಿಯಾಗುತ್ತಿದ್ದೇವೆ ಎಂದರು.
Chalavadi community demands distribution of internal reservation in cluster form
