SUDDILIVE || SAGARA
ಸಾಗರದಲ್ಲಿ ಗೋಮಾಂಸ ಮಾರಾಟದ ಅಡ್ಡೆಯ ಮೇಲೆ ಪೊಲೀಸ್ ದಾಳಿ-Police raid beef stall in Sagar
ಸಾಗರದಲ್ಲಿ ಗೋಮಾಂಸ ಪತ್ತೆಯಾಗಿದೆ. ನವನೀತ್ ಕಾಲೋನಿ ಮೊದಲನೇ ತಿರುವು ಎಲೆ ಫಾರೂಕ್ ಅವರ ಮನೆಯಲ್ಲಿ ಹೊರಗಡೆಯಿಂದ ಗೋಮಾಂಸವನ್ನ ತಂದು ಮಾರಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.
ಶಿವಮೊಗ್ಗದ ವ್ಯಕ್ತಿಯಿಂದ 80 ಕೆಜಿದನಮಾಂಸವನ್ನ ತಂದು ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆದಿದೆ. ದಾಳಿಯಲ್ಲಿ ಒಟ್ಟು 24.650ಕೆಜಿ ಮಾಂಸ ದೊರೆತಿದೆ. ಹಿಂದೂ ಜಾಗರಣ ವೇದಿಕೆ ಮಾಹಿತಿ ಆಧಾರದ ಮೇರೆಗೆ ಪೊಲೀಸ್ ರೈಡ್ ಆಗಿದೆ.
ಮಾಹಿತಿ ಆಧಾರದ ಮೇರೆಗೆ ಪೊಲೀಸರು ಬೆಳಿಗ್ಗೆಯಿಂದ ಎಲೆ ಫಾರೂಕ್ ಮನೆಯ ಮೇಲೆ ಕಣ್ಣಿಟ್ಟಿದ್ದ ಪೊಲಿಸರಿಗೆ ಯಾವ ಕುರುಹುವನೂ ಪತ್ತೆಯಾಗಿರಲಿಲ್ಲ. ಸಂಜೆಯ ನಂತರ ಜನ ಬಂದು ಖರೀದಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಮನೆಯ ಐಸ್ ಕ್ರೀಂ ಡಿಫ್ರೀಜ್ ನಲ್ಲಿ ಗೋಮಾಂಸ ಪತ್ತೆಯಾಗಿದೆ.
ಕೂಲ್ಡ್ರಿಂಕ್ಸ್ ಅಂಗಡಿಯಿಟ್ಟುಕೊಂಡು ಬದುಕು ನಡೆಸುತ್ತಿರುವ ಎಲೆ ಫಾರೂಕ್ ಸಧ್ಯ ಪೊಲೀಸರ ವಶದಲ್ಲಿದ್ದಾನೆ. ಸಾಗರ ಟೌನ್ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ.
Police raid beef stall in Sagar
