SUDDILIVE || SHIVAMOGGA
ಪರೀಕ್ಷೆ ಬರೆಯಲು ಬಂದವರಿಗೆ ಪೆನ್ ಕೊಟ್ಟು ಆಲ್ ದ ಬೆಸ್ಟ್ ಹೇಳಿದ ವಿಯಕುಮಾರ್-Viyakumar gave a pen to those who came to write the exam and wished them all the best
ಎಂದಿನಂತೆ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಭಗೊಂಡಿದೆ. ಆರಂಭದ ಮೊದಲನೇ ದಿನ ಮಕ್ಕಳಿಗೆ ಕನ್ನಡ ಸೇರಿದಂತೆ ಮೊದಲ ಪ್ರಥಮ ಭಾಷೆಯ ಪರೀಕ್ಷೆ ನಡೆಯುತ್ತಿದೆ. ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು ಒಂದು ಗಂಟೆ ಮೊದಲೇ ಶಾಲೆಗಳಲ್ಲಿ ಮಕ್ಕಳು ಆಗಮಿಸಿದ್ದರು.
ಮೊದಲನೆಯ ದಿನದ ಅಂಗವಾಗಿ ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಪ್ ಕಾಮ್ಸ್ ನ ಅಧ್ಯಕ್ಷ ವಿಜಯಕುಮಾರ್ ಅವರು ಮಕ್ಕಳಿಗೆ ಪೆನ್ ಗಳನ್ನ ನೀಡಿ ಆಲ್ ದ ಬೆಸ್ಟ್ ಹೇಳಿದ್ದಾರೆ.
ಮಕ್ಕಳು ಎಂದಿನಂತೆ ಶಾಲೆಗೆ ಪೋಷಕರ ಜೊತೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆಗಮಿಸಿ ರಿಜಿಸ್ಟ್ರ ನಂಬರ್ ಪರಿಶೀಲನೆ ನಡೆಸುತ್ತಿರುವ ದೃಶ್ಯ ಎಲ್ಲಾ ಶಾಲೆಗಳಲ್ಲಿ ಸಾಮಾನ್ಯವಾಗಿ ಕಂಡುಬಂದಿದೆ. ಇಂದು 23,262 ವಿದ್ಯಾರ್ಥಿಗಳು ಪರೀಕ್ಷೆಯನ್ನ ಜಿಲ್ಲೆಯಲ್ಲಿ ಎದುರಿಸುತ್ತಿದ್ದಾರೆ.
79 ಪರೀಕ್ಷಾ ಕೇಂದ್ರಗಳಿದ್ದು ರೆಗ್ಯುಲರ್ ಫ್ರೆಶ್, ರೆಗ್ಯೂಲರ್ ರಿಪೀಟರ್ಸ್, ರೆಗ್ಯೂಲರ್ ಪ್ರೈವೇಟ್, ಪ್ರೈವೇಟ್ ರಿಪೀಟರ್ ಗಳು ಎಂಬ 4 ವಿವಿಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
Viyakumar gave a pen to those who came to write the exam and wished them all the best
