ಗೃಹ ಬಳಕೆಯ ಸಿಲಿಂಡರ್ ಹೋಟೆಲ್ ನಲ್ಲಿ ಪತ್ತೆ-ಸೀಸ್ ಮಾಡಿದ ಅಧಿಕಾರಿಗಳು-Officials seize domestic cylinders from hotel

 SUDDILIVE || SHIVAMOGGA

ಗೃಹ ಬಳಕೆಯ ಸಿಲಿಂಡರ್ ಹೋಟೆಲ್ ನಲ್ಲಿ ಪತ್ತೆ-ಸೀಸ್ ಮಾಡಿದ ಅಧಿಕಾರಿಗಳು-Officials seize domestic cylinders from hotel       

Donestic cylinder


ನೆಹರು ಕ್ರೀಡಾಂಗಣದ ಬಳಿ ಇರುವ ವಿಧಾತ್ರಿ ಕೆಫೆಯಲ್ಲಿ ಗ್ರಹಬಳಕೆಯ ಸಿಲಿಂಡರ್ ಗಳನ್ನು ಉಪಯೋಗಿಸುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಅಗತ್ಯ ವಸ್ತು ಕಾಯ್ದೆ ಮತ್ತು ಎಲ್ಪಿಜಿ ಆಕ್ಟ್ 2000 ಅಡಿಯಲ್ಲಿ ಮೂರು ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಮತ್ತು ಅದನ್ನು ಅಮಾನತು ಪಡಿಸಿ ಸಂಬಂಧ ಪಟ್ಟ ಗ್ಯಾಸ್ ಕಂಪನಿಯಲ್ಲಿ ಇರಿಸಿದ್ದು ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಫುಡ್ ಸಹಾಯಕ  ನಿರ್ದೇಶಕರಾದ ಲಕ್ಷ್ಮಿ ಮತ್ತು ಆಹಾರ ನಿರೀಕ್ಷಕರಾದ ರಾಜಪ್ಪ ಹಾಗೂ ಮನೋಜ್ ರಾವ್ ಭಾಗವಹಿಸಿದ್ದರು

 ಅಡುಗೆ ಅನಿಲ ವಿತರಣೆಯಲ್ಲಿ ವ್ಯತ್ಯಾಸವಾಗುತ್ತಿದ್ದು ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆ ಇರುವುದರಿಂದ ಕೆಲವು ಕಡೆ ವಾಣಿಜ್ಯ ಉದ್ದೇಶಕ್ಕೆ ಗ್ರಹ ಬಳಕೆಯ ಸಿಲಿಂಡರ್ ಗಳನ್ನು ಬಳಸುತ್ತಿರುವುದು ದೂರಿನ ಹಿನ್ನೆಲೆಯಲ್ಲಿ ಇದು ಅಪರಾಧವಾಗಿದ್ದು ಆಹಾರ ಇಲಾಖೆ ಅಧಿಕಾರಿಗಳು ನಗರದ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Officials seize domestic cylinders from hotel

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close