SUDDILIVE || SHIVAMOGGA
ಜವರಾಯನಾಗಿ ಬಂದ ಲಾರಿ, ದಂಪತಿಗಳು ಅಪಘಾತದಲ್ಲಿ ಸಾವು-Couple killed in accident involving lorry carrying smugglers
ಮದುವೆ ಆಗಿ ಒಂದೂವರೆ ವರ್ಷ ಕಳೆದಿದ್ದ ದಂಪತಿಗಳ ಜೀವನ ರಸ್ತೆ ಅಪಘಾತದಲ್ಲಿ ಕೊನೆಗೊಂಡಿದೆ. ಬಾಳಿ ಬದುಕಬೇಕಿದ್ದ ದಂಪತಿಗಳಿಗೆ ಜವರಾಯ ಅಪಘಾತದಲ್ಲಿ ಬಲಿ ತೆಗೆದುಕೊಂಡಿದ್ದಾನೆ.
ಲಾರಿ - ಬೈಕ್ ನಡುವೆ ಡಿಕ್ಕಿಯಾಗಿ ದಂಪತಿ ದುರ್ಮರಣಕ್ಕೊಳಗಾಗಿದ್ದಾರೆ. ಭದ್ರಾವತಿಯ ಶಂಕರಘಟದ ಬಿಆರ್ ಪಿಯಲ್ಲಿ ನಿನ್ನೆ ಭಾನುವಾರ ಸಂಜೆ ಅಪಘಾತವಾಗಿದೆ. ಶಿವಮೊಗ್ಗದ ಕಡೆಯಿಂದ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಜವರಾಯ ಲಾರಿ ರೂಪದಲ್ಲಿ ಬಂದು ಜೀವ ತೆಗೆದುಕೊಂಡಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ದಂಪತಿಗಳನ್ನ ಬಾಬು(೩೧) ಸಾವಿತ್ರಿ (೨೫) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಹೊಟೆಲ್ ಒಂದರಲ್ಲಿ ದಂಪತಿಗಳು ಕೆಲಸ ಮಾಡುತ್ತಿದ್ದರು.
ಶಿವಮೊಗ್ಗದಿಂದ ಬರುತ್ತಿದ್ದ ಜೋಳತುಂಬಿದ ಲಾರಿ, ರಸ್ತೆ ಹತ್ತಲು ಆಗದೆ ಹಿಂದೆ ಬರುತ್ತಿದ್ದ ವೇಳೆ ಹಿಂಬದಿ ಬರುತ್ತಿದ್ದ ಬೈಕ್ ಮೇಲೆ ಹತ್ತಿದೆ. ಲಾರಿ ಹತ್ತಿದ್ದ ರಭಸಕ್ಕೆ ಸ್ಥಳದಲ್ಲಿಯೇ ದಂಪತಿ ಸಾವು ಕಂಡಿದ್ದಾರೆ. ಬಾಬು ಮತ್ತು ಸಾವಿತ್ರಿಯು ತರಿಕೆರೆಯ ಹರುನಳ್ಳಿ ಗೌಳಿಗೆರೆ ಕ್ಯಾಂಪ್ ನ ನಿವಾಸಿಗಳಾಗಿದ್ದಾರೆ.
ಒಂದುವರೆ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಬಾಬು ಮತ್ತು ಸಾವಿತ್ರಿ ಕೂಲಿಕೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರ ದಾಂಪತ್ಯ ಜೀವನ ನೋಡಲಾಗದೆ ಲಾರಿಯ ರೂಪದಲ್ಲಿ ಜವರಾಯ ಬಂದು ಜೀವತೆಗೆದನಾ ಎಂಬ ಅನುಮಾನ ಹುಟ್ಟಿಕೊಂಡಿದೆ.
Couple killed in accident involving lorry carrying smugglers


