SUDDILIVE || SHIVAMOGGA
ಮೀನು ಸಾಕಾಣಿಕೆಯ ಟೆಂಡರ್ ಸಹ ಅವೈಜ್ಞಾನಿಕ-Even the tender for fish farming is unscientific
ಸಾಗರ ಸೊರಬ ಶಿಕಾರಿಪುರ ಸೇರಿದಂತೆ 48 ಕೆರೆಯಲ್ಲಿ ಮೀನು ಸಾಕಾಣಿಕೆಗೆ ಕರೆದಿರುವ ಟೆಂಡರ್ ಅವೈಜ್ಞಾನಿಕವಾಗಿದೆ ಎಂದು ಮೀನು ಸಾಕಾಣಿಕೆದಾರರು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೀನುಸಾಕಾಣಿಕೆದಾರರಾದ ಮಲ್ಲೇಶಪ್ಪ, ಟೆಂಡರ್ ಆನ್ ಲೈನ್ ಆಗಿದ್ದು ಏ.7 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಟೆಂಡರ್ ಅರ್ಜಿ ಕರೆದು ಒಂದು ತಿಂಗಳಾದರೆ ಆನ್ ಲೈನ್ ಓಪನ್ ಆಗುತ್ತಿಲ್ಲ ಎಂದು ದೂರಿದರು.
ಮೀನು ಸಾಕಾಣಿಕೆಗೆ ಟೆಂಡರ್ ನ್ನ ಪ್ರತಿವರ್ಷ ಜೂನ್ ಜುಲೈಗೆ ಕರೆಯಲಾಗುತ್ತಿತ್ತು, ಈ ಬಾರಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಕರೆಯುತ್ತಿದ್ದಾರೆ. ಇದು ಅವೈಜ್ಞಾನಿಕವಾಗಿದೆ. ಅದರಲ್ಲೂ ಮೀನುಗಾರಿಕೆ ಇಲಾಖ ಕರೆಯಬೇಕಿತ್ತು ಆದರೆ ಸಣ್ಣನೀರಾವರಿ ಇಲಾಖೆ ಆನ್ ಲೈನ್ ಗೆ ಕರೆದಿದೆ.
ಟೆಂಡರ್ ಕರೆಯುವ ಬಗ್ಗೆ ಕೆರೆಯ ಮೀನು ಹಿಡಿಯುವರಿಗೆ ಮಾಹಿತಿ ನೀಡದೆ ಅವೈಜ್ಞಾನಿಕವಾಗಿ ಕರೆಯಲಾಗಿದೆ. ಸರ್ಕಾರದ ಹಣ ಕೂಡ ದುರುಪಯೋಗವಾಗಿತ್ತಿದೆ. ಪಾರದರ್ಶಕವಾಗಿ ನಡೆಯಬೇಕು ಎಂದು ತಿಳಿಸಿದರು.
Even the tender for fish farming is unscientific

