SUDDILIVE || SHIVAMOGGA
ನಿರ್ಮಾಣ ಹಂತದಲ್ಲಿದ್ದ ಮನೆಕಟ್ಟಡದ 2 ನೇ ಅಂತಸ್ತಿನಿಂದ ಬಿದ್ದು ಕೂಲಿ ಕಾರ್ಮಿಕ ಸಾವು- Laborer dies after falling from 2nd floor of under-construction building
ನಿರ್ಮಾಣ ಹಂತದಲ್ಲಿರುವ ಮನೆ ಕಟ್ಟಡ ದ ಆರ್ ಸಿ ಸಿ ಕ್ಯೂರಿಂಗ್ ಮಾಡುವ ಸಂದರ್ಭದಲ್ಲಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಕೂಲಿ ಕಾರ್ಮಿಕ ನೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಡೆಂಟಲ್ ಕಾಲೇಜಿನ ಬಳಿ ಇರುವ ಗೋಲ್ಡನ್ ಸಿಟಿ ಲೇಔಟ್ ನಲ್ಲಿ ನಡೆದಿದೆ.
ರೇವಣ್ಣ ಎಂಬ 67 ವರ್ಷದ ಗಾರೆ ಮೇಸ್ತ್ರಿ ಇವರು ಗೋಲ್ಡನ್ ಸಿಟಿ ಲೇಔಟ್ ನಲ್ಲಿ ಸೈಟ್ ನಂಬರ್ 69 ರಲ್ಲಿ ನಡೆಯುತ್ತಿರುವ ಮನೆ ಕಟ್ಟಡ ಕಾಮಗಾರಿಯ ವೇಳೆ ಎರಡನೇ ಮಹಡಿಯಲ್ಲಿ ಆರ್‌ಸಿಸಿಗೆ ನೀರು ಹರಿಸಲು ಹೋದಾಗ ಕಟ್ಟಡದಿಂದ ಬಿದ್ದು ಗಾಯಗೊಂಡಿರುತ್ತಾರೆ
ಅವರನ್ನ ತಕ್ಷಣ ಆಂಬುಲೆನ್ಸ್ ನಲ್ಲಿ ಮೆಗನ್ ಆಸ್ಪತ್ರೆಗೆ ಸಾಗಿಸಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಳ್ಳಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಅವರು ಸಾವು ಕಂಡಿದ್ದಾರೆ. ಈ ಘಟನೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಆಗಿದೆ.
Laborer dies after falling from 2nd floor of under-construction building
