SUDDILIVE || SHIVAMOGGA
ತಂದೆಯ ಸಾವಿನ ನಡುವೆಯೂ ಪರೀಕ್ಷೆ ಬರೆದ ಮಗ-Son writes exam despite father's death
ದ್ಯಾವಿನಕೆರೆಯಲ್ಲಿ ಸಾಲದ ಬಾದೆಗೆ ಸಿಲುಕಿ 45 ವರ್ಷದ ವ್ಯಕ್ತಿ ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ನಡುವೆಯೂ ಅವರ ಪುತ್ರ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವ ಘಟನೆ ವರದಿಯಾಗಿದೆ.
ಕುಂಸಿ ಠಾಣ ವ್ಯಾಪ್ತಿಯಲ್ಲಿ ಬರುವ ದ್ಯಾವಿನಕೆರೆಯಲ್ಲಿ ಮಂಜುನಾಥ್ ಎಂಬ 45 ವರ್ಷದ ವ್ಯಕ್ತಿ ಸಾಲಬಾದೆಯಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದರು. ಅವರ ಸ್ಥಿತಿ ಚಿಂತಾಜನ ಸ್ಥಿತಿಗೆ ತಲುಪಿದ್ದರಿಂದ ಮೆಗ್ಗಾನ್ ಗೆ ಕರೆತರಲಾಗಿತ್ತು. ಮೆಗ್ಗಾನ್ ನಲ್ಲಿ ಜೀವ ಬದುಕಿಸುವುದು ಕಷ್ಟಸಾಧ್ಯವಾಗಿದ್ದ ಕಾರಣ ಅವರನ್ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲೂ ಸಾಧ್ಯವಾಗದ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ವಾಪಾಸ್ ಕರೆತರಲಾಗಿತ್ತು. ನಿನ್ನೆ ರಾತ್ರಿ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅಸುನೀಗಿದ್ದಾರೆ. ಇಂದು ಅವರ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಅವರ ಮಗ ಪ್ರೀತಮ್ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ.
ತಂದೆಯ ಸಾವಿನ ನಡುವೆಯೂ ಎದೆಗುಮದ ಬಾಲಕ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾನೆ. ಮಂಡಘಟ್ಟದಲ್ಲಿ ಅಭ್ಯಾಸಿಸುತ್ತಿದ್ದ ಪ್ರೀತಮ್ ಆಯನೂರಿನ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕಿತ್ತು. ಇಂದು ಪರೀಕ್ಷೆ ಬರೆದಿದ್ದಾನೆ. ಮತ್ತೊಬ್ಬ ಮಗ ಚರಣ್ 8 ನೇತರಗತಿ ಅಭ್ಯಾಸಿಸುತ್ತಿದ್ದಾನೆ.
Son writes exam despite father's death

