SUDDILIVE || SAGARA
ರಾತ್ರಿ ವೇಳೆ ತೋಟಕ್ಕೆ ನೀರು ಬಿಡಲು ಹೋಗಿದ್ದ ರೈತ ಸಾವು- Farmer dies after going to water his garden at night
ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ತೋಟಕ್ಕೆ ನೀರು ಹಾಯಿಸಲು ಹೋದಾಗ ಎಡಗಾಲಿಗೆ ಯಾವುದೋ ಹಾವು ಕಚ್ಚಿ ರೈತ ಹುಚ್ಚಪ್ಪ (65) ಸಾವನ್ನಪ್ಪಿದ್ದಾರೆ.
ನಂತರ ಅವರನ್ನು ಪ್ರತಮ ಚಿಕಿತ್ಸೆ ನೀಡಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ವೈದ್ಯರು ಪರೀಕ್ಷಿಸಿದಾಗ ರೈತ ಮೃತ ಪಟ್ಟಿರುವುದಾಗಿ ವೈದ್ಯರು ದೃಢೀಕರಿಸುತ್ತಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮಸ್ಥರ ಆಕ್ರೋಶ
ಬೇಸಿಗೆ ಕಾಲದಲ್ಲಿ ಬೆಳಗಿನ ಜಾವ 3:00 ಗಂಟೆ ಸಮಯದಲ್ಲಿ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ನೀಡುತ್ತಿದ್ದಾರೆ. ಹೀಗಾಗಿ ರೈತರು ರಾತ್ರಿ ಎಲ್ಲಾ ನೀರು ಹಾಯಿಸಲು ಹೋದಾಗ ಇಂತಹ ದುರ್ಘಟನೆ ನಡೆಯುತ್ತಿದೇ, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Farmer dies after going to water his garden at night
