SUDDILIVE || SHIVAMOGGA
ಮಾರ್ನಮಿ ಬೈಲು-ಎರಡು ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸಾವು- One dead in collision between two bikes
ಎರಡು ಬೈಕ್ ಗಳ ನಡುವೆ ಉಂಟಾಗ ರಸ್ತೆ ಅಪಘಾತದಲ್ಲಿ ಓರ್ವರು ಮೃತ ಪಟ್ಟಿದ್ದರೆ, ಮತ್ತೋರ್ವ ಬೈಕ್ ಸವಾರ ತೀವ್ರ ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಮಾ.24 ರಂದು ರಾತ್ರಿ ಸುಮಾರು 9 ಗಂಟೆಗೆ ಶಿವಮೊಗ್ಗ ನಗರದ ಟೆಂಪೋ ಸ್ಟಾಂಡಿನಲ್ಲಿ ಸಂದೇಶ್ ಮೋಟರ್ ಸರ್ಕಲ್ ಕಡೆಯಿಂದ ಬರುತ್ತಿದ್ದ KA09HW4850 ದ್ವಿಚಕ್ರ ವಾಹನ ಮತ್ತು ಆರ್ ಎಂ ಎಲ್ ನಗರದ ಕಡೆ ಹೋಗುತ್ತಿದ್ದ KA14EM2827 ಬೈಕುಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
![]() |
ಅಪಘಾತದಲ್ಲಿ KA14EM2827 ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಗುರುರಾಜ ತಂದೆ ರಮೇಶ್ ನಾಯಕ (35) ಸ್ಥಳದಲ್ಲುಯೇ ಸಾವುಕಂಡ ವ್ಯಕ್ತಿಯಾಗಿದ್ದಾರೆ. ಮೃತ ಗುರುರಾಜಗ ಗೋಕುಲ ಸ್ವೀಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಮಾರ್ನಮಿಬೈಲ್, ಟೆಂಪೋ ಸ್ಟಾಂಡ್ ನಿವಾಸಿಯಾಗಿದ್ದರು.
KA09HW4850 ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮುರುಳಿ ತಂದೆ ಬೈರೇಶ್, (23), ಗಾಯಗೊಂಡಿದ್ದಾರೆ. ಇವರನ್ನಮಣಿಪಾಲ್ ಗೆ ಸಾಗಿಸಲಾಗಿದೆ. ಭದ್ರಾವತಿಯ ಹೊಳೆಹೊನ್ನೂರಿನಲ್ಲಿ ಫೋಟೋಗ್ರಾಫರ್ ಕೆಲಸ ಮಾಡಿಕೊಂಡಿದ್ದರು. ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
One dead in collision between two bikes

