SUDDILIVE || SHIVAMOGGA
ನಡುರಸ್ತೆಯಲ್ಲೆ ಮೋದಿಯನ್ನ ಕುಣಿಯಿಸಿದ ಟ್ರಂಪ್- Trump mocks Modi in the middle of the road
ಗ್ಯಾಸ್ ಬೆಲೆ ಏರಿಕೆ ಮತ್ತು ಅಮೇರಿಕದ ಅಧ್ಯಕ್ಷ ಟ್ರಂಪ್ ಹೇಳಿದಂತೆ ಮೋದಿ ಕೇಳುತ್ತಿರುವುದನ್ನ ಖಂಡಿಸಿ ಇಂದು ಗೋಪಿ ವೃತ್ತದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಅಣಕು ಪ್ರದರ್ಶಿಸಿದ ಸಂಘಟನೆ ಮೋದಿಯವರ ಕುತ್ತಿಗೆಗೆ ನಾಯಿ ಚೇನು ಕಟ್ಟು ಅದರ ತುದಿಯನ್ನ ಟ್ರಂಪ್ ಹಿಡಿದು ಡ್ಯಾನ್ಸ್ ಮಾಡಿಸಲಾಗಿದೆ. ಅಮೇರಿಕ ಭಾರತಕ್ಕೆ ಅಂಕುಶ ಹಾಕಿದೆ ಎಂಬ ಅಣಕುಪ್ರದರ್ಶನ ಮಾಡಲಾಯಿತು. ಇದರ ಜೊತೆಗೆ ಗ್ಯಾಸ್ ಬೆಲೆ ಏರಿಸಿದ್ದಕ್ಕೆ ಕಟ್ಟಿಗೆ ಹಚ್ಚಿಸಿ ನಡು ರಸ್ತೆಯಲ್ಲಿ ಹಾಲು ಕಾಯಿಸಲಾಯಿತು.
ಮನೆ ಗ್ಯಾಸ್, ವಾಣಿಜ್ಯ ಬಳಕೆ ಗ್ಯಾಸ್ ತೈಲ ಬೆಲೆ ಏರಿಕೆ ವಿರೋಧಿಸಿ ಇಂದು ಸಂಘಟನೆ ಪ್ರತಿಭಟನೆ ನಡೆಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಜವಳಿ ಮೂಲಸೌಲಭ್ಯ ನಿಗಮದ ಅಧ್ಯಕ್ಷ ಚೇತನ್ ಗೌಡ ಅಚ್ಚೇದಿನ್ ಆಯೇಗಾ ಎಂಬ ಘೋಷಣೆಯೊಂದಿಗೆ ಬಂದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಇಂದು ಗ್ಯಾಸ್ ದರವನ್ನ ಏರಿಸುವ ಮೂಲಕ ಜನರನ್ನ ಸಂಕಷ್ಟ ದೂಡಿದೆ.
ರಷ್ಯದಲ್ಲಿ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿರುವುದನ್ನ ಟೀಕಿಸಿದ ಚೇತನ್ ಗೌಡ ಭಾರತದ ಸಂಸದರನ್ನ ಗೆಲ್ಲಿಸುವ ಮೂಲಕ ಪ್ರಧಾನಿಯನ್ನ ಆರಿಸಿದರೆ ಇವರನ್ನ ಟ್ರಂಪ್ ನಿಯಂತ್ರಿಸುತ್ತಿದ್ದಾರೆ. ಇವರ ಹೇಳಿಕೆಯ ಮೂಲಕ ನಾವು ರಷ್ಯದಲ್ಲಿ ಇಂಧನ ಖರೀದಿಸುವಂತಾಗಿದೆ. ಇದಕ್ಕೆ ಮೋದಿಯವರ ವಿದೇಶ ನೀತಿಯೇ ಕಾರಣ ಎಂದು ದೂರಿದರು.
Trump mocks Modi in the middle of the road
