SUDDILIVE || BHADRAVATHI
ಎಗ್ಗಿಲ್ಲದೆ ಸಾಗಿದೆ ಗಾಂಜಾ ವ್ಯಸನಿಗಳ ಹಾವಳಿ- The scourge of marijuana addicts continues unabated
ಭದ್ರಾವತಿಯ ಫಿಶ್ ಮಾರ್ಕೆಟ್ ಹತ್ತಿರವಿರುವ ಹಳ್ಳಕ್ಕೆ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯ ಜಾಗದಲ್ಲಿ ಮೊನ್ನೆ ಭಾನುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಹಳ್ಳಬಿದ್ದು ಮೈಕೈ ಗಾಯಗೊಂಡ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಗಾಂಜಾ ವ್ಯಸನಿಗಳ ಹಾವಳಿ ಎಗ್ಗಿಲ್ಲದೆ ಸಾಗಿದೆ.
ಶಿವಮೊಗ್ಗ ಹಾಗೂ 7 ತಾಲೂಕುಗಳು ಸೇರಿದಂತೆ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘಟಿಕರು ಬೊಬ್ಬೆ ಹೊಡೆಯುತ್ತಿರುವ ಬೆನ್ನಲ್ಲೇ ಯುವಕ ಬೈಕ್ ನಿಂದ ಹಳ್ಳಕ್ಕೆ ಹಾರಿದ ಘಟನೆಯೂ ಸಹ ಇದೇ ಗಾಂಜಾದಿಂದ ನಡೆದಿದೆ ಎಂಬ ಸತ್ಯ ಘಟನೆಯೂ ಬೆಳಕಿಗೆ ಬಂದಿದೆ.
ಈ ಸತ್ಯ ಘಟನೆಯ ಕುರಿತು ಸುದ್ದಿಲೈವ್ ಜನರ ಬಳಿ ಗಾಂಜಾ ನಶೆಯಲ್ಲಿ ನಡೆದಿರಬಹುದು ಎಂಬ ಅನುಮಾನದಿಂದ ಒಂದು ಸುದ್ದಿಯನ್ನ ಬ್ಲಾಗ್ ನಲ್ಲಿ ಪ್ರಕಟಿಸಲಾಗಿತ್ತು. 25 ವರ್ಷದ ಯುವಕ ಗಾಂಜಾ ಸೇವಿಸಿ ಬೈಕ್ ರೈಡ್ ಮಾಡಿದ್ದು ನಂತರ ಹಳ್ಳಕ್ಕೆ ಬಿದ್ದ ಘಟನೆ ನಡೆದಿದೆ. ಗಾಂಜಾ ಪ್ರಕರಣಗಳು ಜಿಲ್ಲೆಯ ಪೊಲೀಸರ ಕೈ ಮೀರಿ ಹೋಗಿದೆ ಎಂದು ಸುದ್ದಿಯಲ್ಲಿ ಅನುಮಾನ ವ್ಯಕ್ತಪಡಿಸಿ ಹೇಳಲಾಗಿತ್ತು.
ಆದರೆ ಪೊಲೀಸರ ಕೈ ಮೀರಿ ಹೋಗಿರುವುದು ಸತ್ಯವಾಗಿದೆ. ಕಾರಣ ಹೊಸಮನೆ ಶಿವಾಜಿ ಸರ್ಕಲ್ ಬಳಿ 23 ವರ್ಷದ ಟಿ.ಜಾನ್ ಪೀಟರ್ ಎಂಬ ಪೇಂಟರ್ ಗಾಂಜಾ ಸೇವಿಸಿದ್ದ ಎಂದು ಆತನ ವಿರುದ್ಧ ಗಾಂಜಾ ಪ್ರಕರಣ ದಾಖಲಾಗಿತ್ತು. ಸಂಜೆ ಹೊತ್ತಿಗೆ ಹೊಸಮನೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಗಾಂಜಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ರಾತ್ರಿ 7-10 ಕ್ಕೆ ಎಫ್ಐಆರ್ ಆಗುತ್ತೆ.
ಆದರೆ ಗಾಂಜಾ ಪಾಸಿಟಿವ್ ಬಂದರೂ ಈ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾತ್ರಿ 10 ಗಂಟೆ ಸುಮಾರಿಗೆ ಹೋಗಿ ಹಳ್ಳಕ್ಕೆ ಬಿದ್ದಿದ್ದಾನೆ. ಹಳ್ಳಕ್ಕೆ ಬಿದ್ದ ಯುವಕನನ್ನ ಇದೇ ಪೊಲೀಸರು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸುತ್ತಾರೆ. ಪ್ರಕರಣ ದಾಖಲಾದರೆ ಠಾಣೆಯಿಂದ ಬಹುತೇಕ ಬಿಡುಗಡೆಯಾಗುವುದು ಕಷ್ಟವಾದರೆ ನಿಯಂತ್ರಣಗೊಳ್ಳುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಯಾರಿಗೂ ಅನಾಹುವಾಗಿಲ್ಲ. ಆದರೆ ಇಲ್ಲಿ ಬಿಡುಗಡೆಯಾಗಿ ಅಪಘಾತಕ್ಕೆ ಸಿಲುಕಿಕೊಂಡಿದ್ದಾನೆ.
ಅಪಘಾತದಲ್ಲಿ ಆತನಿಗೆ ತೊಂದರೆಯಾಗಿಲ್ಲ. ಅನಾಹುತದಲ್ಲಿ ಹೆಚ್ಚುಕಡಿಮೆಯಾಗಿದ್ದರೆ ಯಾರು ಜವಬ್ದಾರರು ಎಂಬ ಪ್ರಶ್ನೆಯೂ ಕಾಡುತ್ತದೆ. ಮತ್ತೊಬ್ಬರಿಗೆ ತೊಂದರೆಯಾದರೆ ಆಗಿದ್ದರೂ ಸಮಸ್ಯೆಯಾಗುತ್ತಿತ್ತು. ಇದೇ ರೀತಿ ಶರಾವತಿ ನಗರದಲ್ಲಿ ಗಾಂಜಾ ಪ್ರಕರಣ ಕಂಡುಬಂದಿದೆ. ಆದರೆ ಠಾಣಾ ಜಾಮೀನಿನ ಮೇಲೆ ಬಿಡುಗಡೆಯಾದವನು ಪತ್ನಿಯನ್ನ ಇನ್ನಿಲ್ಲದೆ ಹಲ್ಲೆ ನಡೆಸಿದ್ದಾನೆ. ಹಾಗಾಗಿ ಗಾಂಜಾ ವ್ಯಸನಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕ್ರಮ ಜರುಗಬೇಕಿದೆ. ನ್ಯಾಯಾಲಯಗಳು ಸಹ ಈ ಬಗ್ಗೆ ಗಮನಹರಿಸಬೇಕಿದೆ. ಇದಕ್ಕೆ ಕಡಿವಾಣವಿಲ್ಲದ ಕಾರಣ ಗಾಂಜಾ ಅವಾಂತರ ನಗರದಲ್ಲಿ ಎಗ್ಗಿಲ್ಲದೆ ಸಾಗಿದೆ.
The scourge of marijuana addicts continues unabated
