SUDDILIVE || SHIVAMOGGA
ಆಲಿಕಲ್ಲು ಮಳೆ ತಂದ ಅವಾಂತರ-Hailstorm brings chaos
ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಮಳೆ ಬಿದ್ದ ನಂತರವೂ ಒಂದಿಷ್ಟು ಅವಾಂತರಗಳನ್ನ ಸೃಷ್ಟಿದೆ. ವಿನೋಬ ನಗರದ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಮಳೆ ನೀರು ನಿಂತು ಒಂದಿಷ್ಟು ವಾಹನ ಸಂಚಾರಕ್ಕೆ ತೊಡಕು ಉಂಡು ಮಾಡಿದೆ.
ಇಂದು ಸಂಜೆ 4-30 ಕ್ಕೆ ಸುರಿದ ಗುಡುಗು ಸಹಿತ ಆಲಿಕಲ್ಲು ಮಳೆ ವಿನೋಬ ನಗರದಲ್ಲಿ ಒಂದಿಷ್ಟು ಚಿತ್ರಣಗಳನ್ನೇ ಬದಲುಸಿದೆ. ಮುಖ್ಯ ರಸ್ತೆಯಲ್ಲಿ ನಿಲಿಸಿದ್ದ ಕಾಲುಗಳ ಸುತ್ತ ಮಳೆ ನೀರು ಚಲಿಸದ ಕಾರಣ ಕಾರಿನ ಟಯರ್ ಗಳು ಜಲಾವೃತಗೊಂಡಿದೆ.
ಅಲ್ಲಲ್ಲಿ ವೈಯರ್ ಗಳು ನೇತಾಡುತ್ತಿವೆ. ಆಲಿಕಲ್ಲಿನ ಮಳೆಯ ರಬಸಕ್ಕೆ ರಸ್ತೆಯ ಬದಿಗಳಲ್ಲಿದ್ದ ಮರಗಳ ಹಸಿರು ಎಲೆಗಳು ಉದುರಿ ರಸ್ತೆಗಳು ಹಸಿರು ಮಯವಾಗಿವೆ. ತರಕಾರಿ ಮಾರುಕಟ್ಟೆಯಿಂದ ಪೊಲೀಸ್ ಚೌಕಿಗೆ ಬರುವಷ್ಟರಲ್ಲಿ ಮೂರು ನಾಲ್ಕು ಬಾರಿ ರಸ್ತೆಗಳು ದ್ವುಮುಖ ಸಂಚಾರಗಳಾಗುತ್ತವೆ.
ಉಳಿದಮತೆ ನಗರದ ಹಲವೆಡೆ ಮಳೆಯ ಅವಾಂತರ ಮುಂದು ವರೆದಿದೆ. ತಗಡಿನಶೀಟುಗಳು ಗಾಳಿಗೆ ಹಾರಿ ಬಂದು ವಿನೋಬ ನಗರದ ಮುಖ್ಯರಸ್ತೆಯಲ್ಲಿ ಮರಕ್ಕೆ ನೇತಾಡಲಾರಂಭಿಸಿವೆ. ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ರಸ್ತೆ ಬ್ಲಾಕ್ ಆಗಿರುವ ದೃಶ್ಯ ಲಭ್ಯವಾಗಿದೆ.
ಹಾಗೆ ಸಾಗರ ರಸ್ತೆಯಲ್ಲಿ ಬರುವ ಶೆಣೈ ಗ್ಯಾರೇಜ್ ನ ಹಿಂಭಾಗದ ನೀರು ಹರಿಯುವ ತೋಡಿನಲ್ಲಿ ಆಲೊಕಲ್ಲು ಗಟ್ಟಿಯಾಗಿ ಶೇಕರಣೆಗೊಂಡಿದ್ದು ಅದನ್ನ ಮುರಿದು ಬಕೆಟ್ ನಲ್ಲಿ ಸಂಗ್ರಹಿಸಲಾಗಿದೆ.
ವಿವಿಧೆಡೆ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜನಜೀವನ ಅಸ್ಥವ್ಯಸ್ಥವಾಗಿದೆ. ಗಾಳಿ ಮಳೆಯಿಂದಾಗಿ ಮನೆ ಚಾವಣಿ ಹಾರಿಹೋಗಿರುವ ದೃಶ್ಯ ಲಭ್ಯವಾಗಿದೆ. ಗಾಳಿಯ ರಭಸಕ್ಕೆ ಮನೆಯ ಹೆಂಚುಗಳು ಹಾರಿಹೋಗಿವೆ. ಶಿವಮೊಗ್ಗದ ನ್ಯೂ ಮಂಡ್ಲಿಯಲ್ಲಿ ಈಶ್ವರಪ್ಪ ಎಂಬುವವರ ಮನೆಗೆ ಹಾನಿ ಉಂಟಾಗಿದೆ. ಹೆಂಚುಗಳು ಹಾರಿದ ಪರಿಣಾಮ ಮನೆಯೊಳಗೆ ಮಳೆಯ ನೀರು ಸಂಗ್ರಹವಾಗಿದೆ.
ಇನ್ನೊಂದೆ ಬಡಾವಣೆಯಲ್ಲಿ ರಾಜಕಾಲುವೇ ನೀರು ನುಗ್ಗಿ ಮಬೆಗಳು ಜಲಾವೃತವಾಗಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್ ನಲ್ಲಿ ಮೂರು ರಸ್ತೆಗಳಲ್ಲಿದ್ದ ೨೫ ಕ್ಕೂ ಹೆಚ್ಚುಮನೆಗಳಿಗೆ ರಾಜಕಾಲುವೇ ನೀರು ಸಂಗ್ರಹವಾಗಿದೆ ಮನೆಗೆ ನೀರು ನುಗ್ಗಿದ ಹಿನ್ನಲೆಯಲ್ಲಿ ಜನರು ಹೈರಾಣಾಗಿದ್ದಾರೆ. ರಾಜಕಾಲುವೇ ನೀರು ನುಗ್ಗಿದ ಹಿನ್ನೆಲೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿದೆ. ಜೈಲ್ ರಸ್ತೆಯ ಮುಖ್ಯ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಲೆ ಅಡ್ಡಿಉಂಟುಮಾಡಿದೆ.
ಅದರಂತೆ ಶಿವಮೊಗ್ಗದ ನ್ಯೂಮಂಡ್ಲಿಯಲ್ಲಿ ಶಾಎಯ ಮೇಲ್ಛಾವಣಿ ಎಂದು ಹಾಕಲಾಗಿದ್ದ ತಗಡಿನ ಶೀಟು ಹಾರಿಹೋಗಿ ಚೇತನ್ ಎಂಬುವರಿಗೆ ಸೇರಿದ ಕಾರು ಜಖಂಗೊಂಡಿದೆ.
Hailstorm brings chaos




