SUDDILIVE || SHIVAMOGGA
ಅತ್ಯಂತ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ, ಕಾರಣವೇನು? What is the reason for flying at very low altitude?
ನಿನ್ನೆ ಅತ್ಯಙತ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟದ ಅನುಭವ ಶಿವಮೊಗ್ಗದ ಜನತೆಗೆ ಆಗಿದೆ. ವಿಮಾನ ನಿಲ್ದಾಣ ಆದಾಗಿನಿಂದ ಶಿವಮೊಗ್ಗದ ಜನತೆಗೆ ವಿಮಾನ ಹಾರಾಟ ಅಚ್ಚರಿ ಎನಿಸದಿದ್ದರೂ ಅಚ್ಚರಿಯಂತೂ ಮೂಡಿಸಿದೆ. ಈ ಅಚ್ಚರಿಗೆ ಸ್ಪಷ್ಟನೆಯೂ ದೊರೆತಿದೆ
ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಪತ್ತೆಗಾಗಿ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿತು. ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯಲ್ಲಿ ಇದೇ ಮಾದರಿಯ ಸಮೀಕ್ಷೆ ನಡೆದಿದ್ದು, ಇದೀಗ ಶಿವಮೊಗ್ಗದಲ್ಲಿಯೂ ವಿಮಾನ ಹಾರಾಟ ನಡೆಸಿರುವುದು ಕುತೂಹಲ ಮೂಡಿಸಿದೆ.
ಬುಧವಾರ ಮಧ್ಯಾಹ್ನ ಶಿವಮೊಗ್ಗದಲ್ಲಿ ಹಾರಾಟ ನಡೆಸಿದ ಈ ವಿಶೇಷ ವಿಮಾನವು ಮಂಗಳೂರು ಮತ್ತು ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿ, ಅಲ್ಲಿಂದ ದಾವಣಗೆರೆವರೆಗೆ ಸಂಚರಿಸಿ ಮರಳಿದೆ. ಒಟ್ಟು ಎರಡು ಬಾರಿ ಈ ಹಾರಾಟ ನಡೆಸಲಾಗಿದ್ದು, ಭೂಮಿಯಿಂದ ಕೇವಲ 2,000 ಅಡಿ ಎತ್ತರದಲ್ಲಿ ವಿಮಾನ ಸಂಚರಿಸಿದೆ.
ರಾಷ್ಟ್ರೀಯ ಭೂ ಭೌತಿಕ ಮ್ಯಾಪಿಂಗ್ ಕಾರ್ಯಕ್ರಮದ ಅಡಿಯಲ್ಲಿ ಜಿಎಸ್‌ಐ ಈ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಪ್ರವಳಿಕಟ್ಟಿ ಇದೊಂದು ಜಿಯಾಲಜಿಕಲ್ ಸರ್ವೇ ಆಪ್ ಇಂಡಿಯಾ ವಾರ್ಷಿಕ ಸರ್ವೆಯಾಗಿದೆ. ಈ ಬಾರಿ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಕಾರವಾರದಲ್ಲಿ ಈ ವಿಮಾನ ಹಾರಾಟ ನಡೆದಿದೆ.
ಭೂಮಿಯ ಆಂತರಿಕ ರಚನೆಯ ಬಗ್ಗೆ ವೈಜ್ಞಾನಿಕ ಅಧ್ಯಾಯನ ನಡೆಸಲಾಗುತ್ತಿದೆ. ಇದು ದೇಶದಲ್ಲಿ ಒಂದು ಬಾರಿ ಹಲವೆಡೆ ಸರ್ವೆ ನಡೆಯುತ್ತದೆ. ಪ್ರತಿಬಾರಿ ವರ್ಷಕ್ಕೊಮ್ಮೆ ಈ ಅದ್ಯಾಯನ ನಡೆಯಲಿದೆ. ಈ ಬಾರಿ ಮೂರು ಜಿಲ್ಲೆಯನ್ನಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
What is the reason for flying at very low altitude?
