ಭೇದಿಯಿಂದ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು-ಡಿಸಿ ಹೇಳಿದ್ದೇನು? Woman who was sick with dysentery dies - what did the DC say?

SUDDILIVE || SHIVAMOGGA|| SAGARA

ಭೇದಿಯಿಂದ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು-ಡಿಸಿ ಹೇಳಿದ್ದೇನು? Woman who was sick with dysentery dies - what did the DC say?     

Woman, dysentry


ಪಟ್ಟಣದಲ್ಲಿ ಎರಡು ದಿನಗಳಿಂದ ವಾಂತಿ-ಭೇದಿಯಿಂದ 100ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಭೇದಿ ಹಾಗೂ ನಿಶ್ಯಕ್ತಿಯಿಂದ ಅಸ್ವಸ್ಥಗೊಂಡಿದ್ದ ಐದು ಜನರರಲ್ಲಿ ಪಟ್ಟಣದ ಭಾಗ್ಯಮಂದಿರ ಕಾಲನಿ ನಿವಾಸಿ ಜಯಲಕ್ಷ್ಮೀ(65) ಶಿವಮೊಗ್ಗ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ಮೊದಲೇ ಆರೋಗ್ಯದಲ್ಲಿ ಸಮಸ್ಯೆ ಇದ್ದ ಮಹಿಳೆಗೆ ಬುಧವಾರ ರಾತ್ರಿ ಕಾರ್ಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ಬೆಳಗ್ಗೆ ಸಾಗರದಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಸಾವಿನ ಕಾರಣದ ಬಗ್ಗೆ ವೈದ್ಯರು ಸ್ಪಷ್ಟಪಡಿಸಿಲ್ಲ. ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ವಾಂತಿ-ಭೇದಿ ಮತ್ತು ನಿಶ್ಯಕ್ತಿ ಹಿನ್ನೆಲೆಯಲ್ಲಿ ಬುಧವಾರ 100ಕ್ಕೂ ಹೆಚ್ಚು ಜನ, ಗುರುವಾರ 25 ಮಂದಿ ಸರ್ಕಾರಿ ಆಸ್ಪತ್ರೆ ಹಾಗೂ ಕೆಪಿಸಿ ಆಸ್ಪತ್ರೆಯಲ್ಲಿ 10 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಆರೋಗ್ಯ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ: 

ಆರೋಗ್ಯ ಕೇಂದ್ರಗಳಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿದೆ. ಗುರುವಾರ ಕೆಪಿಸಿ ಆಸ್ಪತ್ರೆಯಲ್ಲಿ 15 ಮಕ್ಕಳು ಮತ್ತು ಒಬ್ಬರು ವಯಸ್ಕರರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮೂವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. 

ತಹಸೀಲ್ದಾರ್ ರಶ್ಮಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ನಾಗರಾಜ್ ನಾಯ್ಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಮಲೇರಿಯಾ ನೋಡಲ್ ಅಧಿಕಾರಿ ಡಾ. ಗುಡದಪ್ಪ, ಹಿರಿಯ ಆರೋಗ್ಯ ನಿರೀಕ್ಷಕರು, ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಿಸಿ ಪ್ರತಿಕ್ರಿಯೆ


ಇಂದು ಪ್ರತಿಕ್ರಿಯಿಸಿದ ಡಿಸಿ ಪ್ರಭುಲಿಂಗ ಕವಲಕಟ್ಟಿ, ಗ್ರಾಮದಲ್ಲಿ ನಡೆದ ಚೌಡೇಶ್ವರಿ ಜಾತ್ರೆಯಲ್ಲಿ ಐಸ್ ಕ್ರೀಂ ಮತ್ತು ಆಲುಗಡ್ಡೆಯಿಂದ ತಯಾರಿಸುವ ವಸ್ತಗಳನ್ನ ಸೇವಿಸಿದವರಿಗೆ ಕಾಮನ್ ಆಗಿ ವಾಂತಿ ಮತ್ತು ಭೇದಿ ಆಗಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇಲ್ಲಿನ ನೀರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ನೀರಿನ ಸಮಸ್ಯೆ ಕಂಡು ಬಂದಿಲ್ಲ. ಹಾಗಾಗಿ ಮಹಿಳೆ ಕಾಲರದಿಂದ ಸತ್ತಿಲ್ಲವೆಂಬುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಆದರೂ ಮಹಿಳೆಯ ಸಾವಿಗೆ ನಿಖರ ಮಾಹಿತಿಗಾಗಿ ಜಿಲ್ಲಾಡಳಿತ ಕಾಯಿತ್ತಿದೆ. ಮಾಹಿತಿ ಬಂದ ಮೇಲೆ ಮಾಧ್ಯಮಕ್ಕೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. 

Woman who was sick with dysentery dies - what did the DC say?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close