SUDDILIVE || THIRTHAHALLI
ಕೆಎಫ್‌ಡಿಯಿಂದ ತೀರ್ಥಹಳ್ಳಿ ಮಹಿಳೆ ಸಾವು- Thirthahalli woman dies from KFD
![]() |
ತಾಲೂಕಿನಲ್ಲಿ ಮಂಗನ ಕಾಯಿಲೆಗೆ ವೃದ್ದೆಯೋರ್ವರು ಸಾವುಕಂಡಿದ್ದು, ಮಹಾಮಾರಿ ಕಾಯಿಲೆಗೆ ಈ ವರ್ಷ ಇದು ಎರಡನೇ ಬಲಿಯಾಗಿದೆ. ಗುರುವಾರ ಅರಳಸುರುಳಿ ಸಮೀಪದ ತಟ್ಟಿಕೇವಿ ಗ್ರಾಮದ ಮಹಿಳೆಮಣಿಪಾಲ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಮೃತಪಟ್ಟವರನ್ನ ಗುಲಾಬಿ ಶೆಟ್ಟಿ (ನಾಗು ಶೆಡ್ತಿ 60 ವರ್ಷ) ಎಂದು ಗುರುತಿಸಲಾಗಿದೆ. ಉಲ್ಬಣಗೊಂಡ ಸ್ಥಿತಿಯಲ್ಲಿ ಮಂಗಳವಾರ ಸರ್ಕಾರಿ ಜೆಸಿ ಆಸ್ಪತ್ರೆಗೆ ನಾಗು ಶೆಡ್ತಿ ದಾಖಲಾಗಿದ್ದರು. ಅವರನ್ನು ಅದೇ ದಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಅಸುನೀಗಿದರು. ಕಿಡ್ನಿ ಸಮಸ್ಯೆಯಿಂದಲೂ ಈ ಮಹಿಳೆ ಬಳಲುತ್ತಿದ್ದರು. ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿಯ ಯುವಕ ಕೆಎಫ್‌ಡಿ ಸೋಂಕಿನಿಂದ ಸಾವಿಗೀಡಾಗಿದ್ದ.
ತಾಲೂಕಿನಲ್ಲಿ KFD ಪ್ರಕರಣಗಳು ಇದುವರೆಗೂ 29 ದಾಖಲಾಗಿದ್ದು,ಜನವರಿಯಿಂದ ಈವರೆಗೆ ಇಬ್ಬರು ಮೃತರಾಗಿದ್ದಾರೆ. ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ5 ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ 3 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೆಸಿ ಆಸ್ಪತ್ರೆಯಲ್ಲಿ 5ರೋಗಿಗಳಿದ್ದು, ಗುಣಮುಖರಾಗಿ ಮನೆಗೆ ಹೋಗಿದ್ದ ಇಬ್ಬರು ಮತ್ತೆ ಜ್ವರ ಮರುಕಳಿಸಿದಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರವಿಂದ್ ತಿಳಿಸಿದ್ದಾರೆ.
Thirthahalli woman dies from KFD

