SUDDILIVE || SHIVAMOGGA
KSRTC ಬಸ್ ಮತ್ತು ಬೈಕ್ ಗೆ ಡಿಕ್ಕಿ-ಓರ್ವ ಸಾವು- KSRTC bus and bike collide between Holalur-Sugur - one dead
ಶಿವಮೊಗ್ಗ ತಾಲೂಕು ಹೊಳಲೂರು ಬಳಿ KSRTC ಬಸ್ ಹಾಗೂ ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ನಿನ್ನೆ ರಾತ್ರಿ ಸುಮಾರು 9-30 ರ ಸಮುದಲ್ಲಿ ನಡೆದಿದೆ.
ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೊರಟಿದ್ದ KSRTC ಬಸ್ ಗೆ ಎದುರಿನಿಂದ ಬಂದ ಟಿವಿಎಸ್ ವಿಕ್ಟರ್ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಬೈಕ್ ಸವಾರ ಕೀರ್ತಿ ನಾಯ್ಕ್ ಎಂಬ 46 ವರ್ಷದ ವ್ಯಕ್ತಿ ಸ್ಥಳದಲ್ಲಿಯೇ ಸಾವುಕಂಡಿದ್ದಾರೆ.
ಹೊಳಲೂರಿನಿಂದ ಬೆಳಲಕಟ್ಟೆಗೆ ಹೋಗುತ್ತಿದ್ದ ವೇಳೆ ಹೊಳಲೂರು-ಸೂಗೂರು ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಕೀರ್ತಿ ನಾಯ್ಕ್ ನಿಧನರಾಗಿದ್ದಾರೆ. ಹೊನ್ನಾಳಿ, ಹರಿಹರದ ಕಡೆಗೆ ಹೊರಟಿದ್ದ ಪ್ರಯಾಣಿಕರಿಗೆ ಬೇರೆ KSRTC ಬಸ್ ನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ.
ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪಿಐ ರಾಘವೇಂದ್ರ ಕಂಡಿಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
KSRTC bus and bike collide between Holalur-Sugur - one dead
