SUDDILIVE || SHIVAMOGGA
ಶಿವಮೊಗ್ಗ, ಭದ್ರಾವತಿಯಲ್ಲಿ ಗೋಮಾಂಸ ಮಾರಾಟದ ಅಡ್ಡಗಳ ಮೇಲೆ ಪೊಲೀಸ್ ದಾಳಿ-Police raid beef stalls in Shivamogga, Bhadravati
ಗೋ ಮಾಂಸಕ್ಕಾಗಿ ಗೋಹತ್ಯೆಗಳು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮುಂದುವರೆದಿದೆ. ನಿನ್ನೆ ಎರಡು ಠಾಣ ವ್ಯಾಪ್ತಿಯಲ್ಲಿ ಕಸಾಯಿ ಖಾನೆಗಳ ಮೇಲೆ ದಾಳಿ ನಡೆದರೆ ಇಂದು ಶಿವಮೊಗ್ಗದಲ್ಲಿ ವಿನೋಬನಗರದ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗೋಹತ್ಯೆ ಅಡ್ಡದ ಮೇಲೆ ದಾಳಿ ನಡೆದಿದೆ.ಸೋಮಿನಕೊಪ್ಪದ ರಾಜಿಕ್ ಎಂಬುವರ ಮನೆಯಲ್ಲೇ ಗೋಮಾಂಸ ಪತ್ತೆಯಾಗಿದೆ. ದಾಳಿಯ ವೇಳೆ 7 ಗೋವಿನ ಚರ್ಮ ಮತ್ತು ಮೂರು ಗೋವಿನಮಾಂಸ ದೊರೆತಿದೆ. ಒಟ್ಟು 180 ಕೆಜಿ ಮಾಂಸ ದೊರೆತಿದ್ದು ಹಿಂದೂ ಸಂಘಟನೆಗಳ ಮಾಹಿತಿ ಆಧಾರದ ಮೇರೆಗೆ ರೈಡ್ ನಡೆದಿದೆ. ಓರ್ವನನ್ನ ಬಂಧಿಸಲಾಗಿದೆ.
ಅದರಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿಯೂ ಸಹ ಗೋಮಾಂಸ ಪತ್ತೆಯಾಗಿದೆ. ಬೊಮ್ಮನ್ ಕಟ್ಟೆಯ ಮೂರು ಕಡೆ ಗೋಮಾಂಸ ಅಡ್ಡದ ಮೇಲೆ ಪೊಲೀಸ್ ದಾಳಿ ನಡೆದಿದೆ.
Police raid beef stalls in Shivamogga, Bhadravati

