SUDDILIVE || SHIVAMOGGA
ಉಷಾ ನರ್ಸಿಂಗ್ ಹೋಂ ಬಳಿ ಪಲ್ಟಿಹೊಡೆದ ಬ್ರೀಝಾ ಕಾರು-Breeza car overturns near Usha Nursing Home
ನಗರದ ಉಷ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ಸುಮಾರು 1 ಗಂಟೆಯ ವೇಳೆ ನಡೆದಿದೆ.
ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ, 14 ವರ್ಷದ ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗು ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಜು ಪುಡಿ ಪುಡಿಯಾಗಿದೆ. ಕಾರಿನಮುಂಭಾಗ ಡೆಂಟ್ ಆಗಿದೆ.
ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಆತನನ್ನ ಹಾಗೂ ಇತರೆ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Breeza car overturns near Usha Nursing Home

