SUDDILIVE || SHIVAMOGGA
ಮ್ಯಾರಥಾನ್ ನಲ್ಲಿ ಎಸ್ಪಿ ಹೆಜ್ಜೆ-SP steps in the marathon
ನಶೆ ಮುಕ್ತ ಕರ್ನಟಕ ಹಾಗೂ ಸೈಬರ್ ಅಪರಾಧಗಳ ಜಾಗೃತಿಗಾಗಿ ಸಾರ್ವಜನಿಕರೊಂದಿಗೆ ಇಂದು ಎಸ್ಪಿ ನಿಖಿಲ್ ಮ್ಯಾರಥಾನ್ ನಡೆಸಿದ್ದಾರೆ. ಬೆಳ್ಳಂಬೆಳಿಗ್ಗೆ ಜಾಗಿಂಗ್ ನಲ್ಲಿ ಎಸ್ಪಿ ಅವರ ಪಾಲ್ಗೊಳ್ಳುವಿಕೆ ಗಮನ ಸೆಳೆದಿದೆ.
ಇಂದು ಡಿಎಆರ್ ಗ್ರೌಂಡ್ ನಲ್ಲಿ ಪೊಲೀಸ್ ಇಲಾಖೆ ಈ ಎರಡೂ ವಿಷಯಗಳ ಕುರಿತು ನಮ್ಮ ಪೊಲೀಸ್ ನಮ್ಮ ಹೆಮ್ಮೆ ಅಡಿಯಲ್ಲಿ ಎಸ್ಪಿ ನಿಖಿಲ್ 5K ಮ್ಯಾರಥಾನ್ ಗೆ ಚಾಲನೆ ನೀಡಿದರು. ಡಿಎಆರ್ ಗ್ರೌಂಡ್ ನಿಂದ ಬಸ್ ಸ್ಟ್ಯಾಂಡ್ ಅಶೋಕ ವೃತ್ತ, ಅಮೀರ್ ಅಹಮದ್ ವೃತ್ತ
ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತ, ಕುವೆಂಪು ರಸ್ತೆ, ಐಬಿ ವೃತ್ತ ಐಬಿ ವೃತ್ತದಿಂದ ಡಿಎಆರ್ ಗ್ರೌಂಡ್ ಗೆ ಬಂದು ತಲುಪಿದೆ. ನೂರಾರು ಜನ ಸಾರ್ವಜನಿಕರು ಈ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದರು. ಮ್ಯಾರಥಾನಲ್ಲಿ ವಿಜೇತರಿಗೆ ಪದಕ ಹಾಗೂ ಪ್ರಶಂಸನ ಪತ್ರಗಳನ್ನು ನೀಡಿ ಗೌರವಿಸಲಾಯಿತು.
SP steps in the marathon
