ಕುಂಭಕರ್ಣ ನಿದ್ದೆಯಿಂದ ಏಳದ ಅಧಿಕಾರಿಗಳು-ಎಗ್ಗಿಲ್ಲದೆ ಸಾಗುತ್ತಿವೆ ಅಕ್ರಮ‌ಮಣ್ಣು ಸಾಗಾಟ- Officials who haven't woken up from their sleep - illegal soil transportation continues unabated

 SUDDILIVE || SHIVAMOGGA

ಕುಂಭಕರ್ಣ ನಿದ್ದೆಯಿಂದ ಏಳದ ಅಧಿಕಾರಿಗಳು-ಎಗ್ಗಿಲ್ಲದೆ ಸಾಗುತ್ತಿವೆ ಅಕ್ರಮ‌ಮಣ್ಣು ಸಾಗಾಟ- Officials who haven't woken up from their sleep - illegal soil transportation continues unabated     

Officials, soils

ಕೆರೆ ಮಣ್ಣನ್ನ ಅಕ್ರಮವಾಗಿ ಜೆಸಿಬಿಯಿಂದ ತೆಗೆದು ಅಮಾಯಕ ರೈತರಿಗೆ ಹಂಚಲಾಗುತ್ತಿದೆ. ಕೆರೆ ಮತ್ತು ಮರಳನ್ನ ಸಂರಕ್ಷಿಸಲು ಆಗದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ನಿದ್ರೆಗೆ ಜಾರಿದೆ. 

ಈ ಇಲಾಖೆಗಳು ಇರುವುದೇ ಸಂಪನ್ಮೂಲಗಳ ಹಾನಿಗೆ ಎಂಬಂತಾಗಿದೆ. ಕೆರೆ ಮಣ್ಣನ್ನ ತೆಗೆಯುವುದು ಎಂಬುದು ಅಪರಾಧ ಎಂಬಂತಾದರೂ ಎಗ್ಗಿಲ್ಲದೆ ಎಲ್ಲಾ ಮಾಫಿಯಾಗಳು ಅಡೆತಡೆಯಿಲ್ಲದೆ ಅಡ್ಜಸ್ಟ್ ಮೆಂಟ್ ಗಳಲ್ಲಿ ನಡೆಯುತ್ತಿದೆ. 

ಹಸೂಡಿ ಕೆರೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಕೆರೆಯ ಮಣ್ಣು

ಎರಡು ಕಡೆ ಈ ರೀತಿ ಕೆರೆಮಣ್ಣನ್ನ ಅಜ್ರಮವಾಗಿ ತೆಗೆದಿರುವ ಬಗ್ಗೆ ದೃಶ್ಯಗಳು ಲಭ್ಯವಾಗಿದೆ. ಶಿವಮೊಗ್ಗದ ಹಸೂಡಿ ಕೆರೆಯಲ್ಲಿ ಜೆಸಿಬಿ ಇಳಿಸಿ ಮಣ್ಣು ತೆಗೆಯಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಇಲ್ಲದೆ ಎಗ್ಗಿಲ್ಲದೆ ಕೆರೆ ಮಣ್ಣನ್ನ ತೆಗೆಯಲಾಗಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಅಧಿಕಾರಿಗಳು ನಿರುಮ್ಮಳವಾಗಿದ್ದಾರೆ. 

ಅಕ್ರಮ ಮಣ್ಣು, ಅಕ್ರಮ ಮರಳು, ಅಕ್ರಮ ಗಾಂಜಾ ಹೀಗೆ ಕಾನೂನು ಬಾಹಿರ ಚಟುವಟಿಕೆಗಳು ಶಿವಮೊಗ್ಗ ಮತ್ತು ಸುತ್ತಮುತ್ತಲು ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗುತ್ತಿದೆ. ಆದರೂ ಕುಂಭಕರ್ಣನ ನಿದ್ರೆಯಿಂದ ಅಧಿಕಾರಿಗಳು ಎದ್ದೇಳದ ಪರಿಣಾಮ ಸಂಪನ್ಮೂಲಗಳು ಖಾಸಗಿಯವರ ಸ್ವತ್ತಾಗುತ್ತಿವೆ.

Officials who haven't woken up from their sleep - illegal soil transportation continues unabated

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close