SUDDILIVE || SHIVAMOGGA
ಪತ್ರಕರ್ತ ಅನಿಲ್ ಕುಟುಂಬಕ್ಕೆ ಕ್ಷೇಮನಿಧಿಯಿಂದ ಪರಿಹಾರ ನೀಡಿ-ಕರವೇ ಸ್ವಾಭಿಮಾನಿ ಬಣ ಆಗ್ರಹ- Provide compensation to journalist Anil's family from the welfare fund - Karave Swabhimani faction demands
ರಸ್ತೆ ಅಪಘಾತದಲ್ಲಿ ಮೃತ ಹೊಂದಿದ ಪತ್ರಕರ್ತ ಅನಿಲ್ ಕುಮಾರ್ ನಾಯಕ ಕುಟುಂಬಕ್ಕೆ ಕ್ಷೇಮ ನಿಧಿ ಮತ್ತು ವಿಶೇಷ ಅನುದಾನಗಳ ಅಡಿಯಲ್ಲಿ ಆರ್ಥಿಕ ನೆರವು ನೀಡುವಂತೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇಂದು ಜಿಲ್ಲಾಧಿಕಾರಿ, ಶಾಸಕರಿಗೆ ಸೇರಿದಂತೆ ಐದು ಕಡೆ ಮನವಿ ಸಲ್ಲಿಸಿದೆ.
ಮಾರ್ಚ್ 8ರಂದು ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಹಿಂಬದಿಯಿಂದ ಬೆಂಕಿನಗರಕ್ಕೆ ಹೋಗುವ ಮಾರ್ಗ ಮಧ್ಯೆ ಎರಡು ದ್ವಿಚಕ್ರ ವಾಹನದ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತ ಅನಿಲ್ ಮರುದಿನ ನಗರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.
ಪತ್ರಕರ್ತ ಅನಿಲ್ ಕುಮಾರ್ ನಾಯ್ಕ್ ಅವರನ್ನು ಕಳೆದುಕೊಂಡ ಕುಟುಂಬ ಆರ್ಥಿಕ ಅವಸಾನಕ್ಕೆ ತಲುಪಿದ್ದು ಇಂದು ಅನಾಥವಾಗಿದೆ ಆದ್ದರಿಂದ ಶಾಸಕ, ಸಂಸದ ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನಾ ನಿಧಿ ಹಾಗೂ ಕಳೆದ ಶಿವಮೊಗ್ಗ ಮಹಾನಗರ ಪಾಲಿಕೆಯ ಬಜೆಟ್ ನಲ್ಲಿ ಮೀಸಲಿರಿಸಿದ್ದ ಪತ್ರಕರ್ತರ ಕ್ಷೇಮಾ ನಿಧಿಯಿಂದ ಈ ಕೂಡಲೇ ಮೃತನಾ ಕುಟುಂಬಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮನವಿಯಲ್ಲಿ ಆಗ್ರಹಿಸಿದೆ.
ಕಳೆದ 20 ವರ್ಷದಿಂದ ಶಿವಮೊಗ್ಗದ ವಾಯ್ಸ್ ಆಫ್ ಶಿವಮೊಗ್ಗ ದಿನಪತ್ರಿಕೆ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನಿಲ್ ಕುಮಾರ್ ನಾಯಕ್ ಟಿವಿ9 ಚಿಕ್ಕಮಂಗಳೂರು ಜಿಲ್ಲಾ ಕ್ಯಾಮೆರಾ ಮ್ಯಾನ್ ಆಗಿ ಸೇವಾ ಸಲ್ಲಿಸಿ ನಂತರ ಬಿಟಿವಿ ಶಿವಮೊಗ್ಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು ಆದರೆ ದುರಂತದ ಅಪಘಾತದಲ್ಲಿ ಮೃತರಾಗಿರುವ ಇವರ ಕುಟುಂಬದಲ್ಲಿ ಆಗಿದೆ ಹಾಗಾಗಿ ಅನಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯದ ದಿಶೆಯಲ್ಲಿ ಆರ್ಥಿಕ ನೆರವು ಅಗತ್ಯವಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್ ಎಸ್ ನಾಗರಾಜ್ ಕೆಬಿ ನೂರುಲ್ಲಾ ಸೈಯದ್ ಮುಜೀಬ್ ಮೊಹಮ್ಮದ್ ಶಫಿ ಗಂಗಾಧರ ಜಿ ಸತೀಶ್ ಮೊದಲಾದರು ಉಪಸ್ಥಿತರಿದ್ದರು.
Provide compensation to journalist Anil's family from the welfare fund - Karave Swabhimani faction demands

