ರಾಮನವಮಿಗೆ ಅಲಂಕಾರಗೊಂಡ ಅಕ್ಕಮಹಾದೇವಿ ವೃತ್ತ(ಉಷ ನರ್ಸಿಂಗ್ ಹೋಂ ಸರ್ಕಲ್)Akkamahadevi Circle (Usha Nursing Home Circle) decorated for Ram Navami

SUDDILIVE || SHIVAMOGGA

ರಾಮನವಮಿಗೆ ಅಲಂಕಾರಗೊಂಡ ಅಕ್ಕಮಹಾದೇವಿ ವೃತ್ತ(ಉಷ ನರ್ಸಿಂಗ್ ಹೋಂ ಸರ್ಕಲ್)Akkamahadevi Circle (Usha Nursing Home Circle) decorated for Ram Navami       

Akkamahadevi, circle


ನಾಳೆ ನಡೆಯುವ ರಾಮನವಮಿಗೆ ಉಷ ನರ್ಸಿಂಗ್ ಹೋಂ‌ ವೃತ್ತ ಕೇಸರಿ ಮಯವಾಗಿದೆ ರಾಮನ ಎದುರೆ ಹನುಮನ ಪ್ರತಿಮೆಗಳನ್ನ ವೃತ್ತದಲ್ಲಿ ಸ್ಥಾಪನೆಗೊಂಡಿದ್ದು ರಾತ್ರಿಯ ವೇಳೆ ದೀಪಾಲಂಕಾರಗೊಂಡಿದೆ. ಜೊತೆಗೆ ಶಿವಾಜಿ‌ಮಹಾರಾಜನ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. 

ಶಿವಮೊಗ್ಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಉಷ ನರ್ಸಿಂಗ ಹೋಂ, ರೈಲ್ವೆ ಓವರ್ ಬ್ರಿಡ್ಜ್, ಸವಳಂಗ ರಸ್ತೆಯ ಡಿವೈಡರ್, ಪ್ರವೇಶ ದ್ವಾರಗಳಲ್ಲಿ ಕೇಸರಿ ಬಂಟಿಂಗ್ ಕಟ್ಟಲಾಗಿದೆ.  ರಾಮನವಮಿ ಅಂಗವಾಗಿ ಕೋಸಂಬರಿ ಪಾನಕ ವಿತರಿಸಲು ವ್ಯವಸ್ಥೆ ಸಹ ವೃತ್ತದಲ್ಲಿ ಮಾಡಿಕೊಳ್ಳಲಾಗಿದೆ. 


 ಅಕ್ಕಮಹಾದೇವಿ ವೃತ್ತದಲ್ಲಿ ಜಿಲ್ಲಾ‌ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ವತಿಯಿಂದ ಜಿಲ್ಲಾ ಮುಖಂಡರಾದ ಸುರೇಶ್ ಬಾಬು  ನೇತೃತ್ವದಲ್ಲಿ  ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮನವಮಿ ಆಚರಿಸಿ ಸಾರ್ವಜನಿಕರಿಗೆ ಕೋಸಂಬರಿ ಪಾನಕ ವಿತರಿಸಲಿದ್ದಾರೆ.

ಬೆಳಗ್ಗೆಯಿಂದ  ಸಾರ್ವಜನಿಕರಿಗೆ ಕೋಸಂಬರಿ ಪಾನಕ ವಿತರಿಸಲಿದ್ದಾರೆ. ನಗರದ ಹಿಂದುಪರ ಸಂಘಟನೆಯ ಮುಖಂಡರುಗಳು  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Akkamahadevi Circle (Usha Nursing Home Circle) decorated for Ram Navami

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close