SUDDILIVE || SHIVAMOGGA
ಸಂಕೇತ್ ನ ಸಮಾದಿಯನ್ನೂ ಬಿಡಲಿಲ್ಲ ದುಷ್ಕರ್ಮಿಗಳು-The criminals did not even leave Sanket's tomb
ಒಂದು ತಿಂಗಳ ಹಿಂದೆ ಅನ್ಯಕೋಮಿನ ಬಾಲಕರಿಂದಲೇ ಹತ್ಯೆಯಾಗಿದ್ದ ಸೂಳೆಬೈಲಿನ ಪ್ರತಿಭಾವಂತ ಬಾಲಕನ ಸಮಾದಿಯನ್ನ ದುಷ್ಕರ್ಮಿಗಳು ಹಾಳುಮಾಡಿದ್ದು ಈ ಕುರಿತು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಊರಗಡೂರಿನ ಗುಡ್ಡೇಮರಡಿ ದೇವಸ್ಥಾನದ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್ ನ ಮೃತದೇಹವನ್ನ ಅಂತ್ಯ ಸಂಸ್ಕಾರ ಮಾಡಿ ಸಮಾದಿ ಮಾಡಲಾಗಿತ್ತು. ಸಮಾದಿಯನ್ನ ಯಾರೋ ದುಷ್ಕರ್ಮಿಗಳು ಇಂದು ಹಾಳು ಮಾಡಿದ್ದು, ಇದರ ಬಗ್ಗೆ ಸಂಕೇತನ ತಂದೆ ತುಂಗ ನಗರದಲ್ಲಿ ದೂರು ದಾಖಲಿಸಿದ್ದಾರೆ.
ಫೆ.23 ರಂದು ಸಂಜೆ ಸೂಳೆಬೈಲಿನ ಶಾಲೆಯ ಬಳಿ ಸ್ನೇಹಿತನ ಮೇಲೆ ಹಲ್ಲೆ ಮಾಡುತ್ತಿರುವುದನ್ನ ಬಿಡಿಸಲು ಹೋಗಿದ್ದ ಸಂಕೇತನನ್ನ 7 ಜನ ಅನ್ಯಕೋಮಿನ ಬಾಲಕರು ಹತ್ಯೆ ಮಾಡಿದ್ದರು. ಈ ಜಗಳದಲ್ಲಿ ಸಂಕೇತ್ ಅನಾಯಸವಾಗಿ ಜೀವಕಳೆದುಕೊಂಡಿದ್ದನು. ಸಂಕೇತ್ ಸಾವಿನಿಂದ ಇಡೀ ಗ್ರಾಮವೇ ದುಖಗೊಂಡಿತ್ತು.
ಸತ್ತಮೇಲಾದರೂ ನೆಮ್ಮದಿಯಿದಿಯಾ ಎಂದು ಕೇಳಿದರೆ ದುಷ್ಕರ್ಮಿಗಳು ಆತನ ಸಮಾದಿಯನ್ನೂ ಹಾಳುಗೈದಿದ್ದಾರೆ. ಯಾರು ಹಾಳು ಮಾಡಿದ್ದಾರೆ. ಯಾರು ಈ ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
The criminals did not even leave Sanket's tomb


