SUDDILIVE || SHIVAMOGGA
ಮಳೆಯ ಆರ್ಭಟ, ಗೋಪಾಳದಲ್ಲಿ ಮನೆಗಳು ಜಲಾವೃತ- Heavy rains flood houses in Gopala
ಮಧ್ಯಾರಾತ್ರಿ ಸುರಿದ ಮಳೆಗೆ ಕೆಲವೊಂದು ಕಡೆ ಮಳೆ ನೀರಿನಲ್ಲಿ ಮನೆಗಳು ಜಲಾವೃತಗೊಂಡಿದೆ. ಕೆಲವು ಕಡೆ ಮರಗಳು ಧರೆಗುರುಳಿವೆ.
ಮಧ್ಯರಾತ್ರಿ 12 ಗಂಟೆಯ ಆಜುಬಾಜು ಸುರಿದ ಮಳೆ ಕೆಲವರ ನಿದ್ದೆ ಕಡೆಸಿದೆ. ಗೋಪಾಳಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿ ಕೆಲ ಮನೆಗಳು ಜಲಾವೃತಗೊಂಡಿರುವ ಚಿತ್ರಗಳು ಲಭಿಸಿವೆ. ಸುಮಾರು 11-30 ರ ಸಮಯದಲ್ಲಿ ಗುಡುಗು ಮಿಂಚುಗಳ ಆರ್ಭಟ ಆರಂಭವಾಗಿದೆ.
ಸುಮಾರು 12 ಗಂಟೆಯ ಸಮಯಕ್ಕೆ ಮಳೆ ಉಧೋ ಎಂದು ಸುರಿದಿದೆ. ಗಾಳಿ ಮಿಂಚು ಸಿಡಿಲುಗಳೊಂದಿಗೆ ಮಳೆ ಆರ್ಭಟಿಸಿದೆ. ಮಳೆಯ ಆರ್ಧನಾದಕ್ಕೆ ಶಿವಮೊಗ್ಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಇವು ಮೋರಿಗಳು ಬ್ಲಾಕ್ ಆಗಿ ನೀರು ನಿಂತಿರುವುದಾ ಅಥವಾ ಬೇರೆ ಕಾರಣಕ್ಕೆ ಮನೆಗಳು ಜಲಾವೃತಗೊಂಡಿವೆಯ ಕಾದು ನೋಡಬೇಕಿದೆ.
ಇನ್ನೂ ಮಳೆಯ ಅವಾಂತರಗಳು ಏನಾನಾಗಿವೆ ಎಂಬುದು ನಾಳೆ ಬೆಳಿಗ್ಗೆ ತಿಳಿಯಲಿಯಲಿದೆ. ಸಧ್ಯಕ್ಕೆ ಪ್ರಾಥಮಿಕ ಮಾಹಿತಿ ಇಷ್ಟಿದೆ.
Heavy rains flood houses in Gopal

