SUDDILIVE || SHIVAMOGGA
ಜಟ್ಟಿಗಳ ಭಾರಿ ಕಾಳಗ-A fierce battle between the Jattis
ಜಟ್ಟಿಗಳ ಬಿಗಿ ಪಟ್ಟಿಗೆ ಪ್ರೇಕ್ಷಕರ ಸಿಳ್ಳೆ, ಕೇಕೆ, ಚಪ್ಪಾಳೆ, ತಮಟೆಯ ನಾದದ ಸುರಿಮಳೆ ಬೀಳುತ್ತಿದ್ದರೆ ಕುಸ್ತಿಗಳನ್ನ ನೋಡುವ ಮಜಾನೇ ಬೇರೆ, ಅದೇ ಅಖಾಡ ಶಿವಮೊಗ್ಗದಲ್ಲಿ ಏರ್ಪಟ್ಟಿದೆ.
ಶಿವಮೊಗ್ಗ ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಮೂರುದಿನಗಳ ವರೆಗೆ ರಾಷ್ಟ್ರಮಟ್ಟದ ಬಾರಿ ಕುಸ್ತಿ ಪಂದ್ಯಾವಳಿ ನಡೆದಿದೆ.
ನೆಹರೂ ಕ್ರೀಡಾಂಗಣದಲ್ಲಿ ಮಾ.06 ರಿಂದ 8 ರವರೆಗೆ ಜಾತ್ರೆಯ ಅಂಗವಾಗಿ ಕುಸ್ತಿಗೆ ಇಂದು ಚಾಲನೆ ನೀಡಲಾಯಿತು. ಇಂದು ಬೆಳಗ್ಗೆಯಿಂದಲೇ ಪಂದ್ಯಗಳು ಆರಂಭವಾಗಿದ್ದವು. ದೊಡ್ಡ ಅಖಾಡದಲ್ಲಿ ಏಕಕಾಲದಲ್ಲಿ ಮೂರು ನಾಲ್ಕು ಪಂದ್ಯಾವಳಿಗಳು ನಡೆದಿದೆ. ಜನರು ವೀಕ್ಷಣೆಗೆ ಆಸನದ ವ್ಯವಸ್ಥೆಯಿತ್ತು. ಚಿಣ್ಣರಿಂದ ಹಿಡಿದು ವೃದ್ಧರ ವರೆಗೂ ಪಂದ್ಯ ವೀಲ್ಷಿಸುತ್ತಿದ್ದರು.
ಮರಿಯಪ್ಪ ಎಂಕೆ ಸುರೇಶ್ ಕುಮಾರ್,ಉಮಾಪತಿ,ಟೆಲೆಕ್ಸ್ ರವಿ ಮತ್ತೆ ದೇವಸ್ಥಾನ ಸಮಿತಿ ಯವರು ಪಂದ್ಯಾವಳಿಗಳನ್ನ ವೀಕ್ಷಿಸಿದರು.ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟು ಗಳು ಬಂದಿದ್ದರು ಗೆದ್ದವರಿಗೆ ನಗದು ಬಹುಮಾನ ಇತ್ತು.
A fierce battle between the Jattis
