SUDDILIVE || BHADRAVATHI
ಕ್ಯಾಂಟೀನ್ ನಲ್ಲಿ ಕಳವು- Theft in the canteen
ಶುಕ್ರವಾರ ರಾತ್ರಿ ಶಿವಮೊಗ್ಗದ ಹೊರವಲಯದ ಹೊಸ ಹೊನ್ನಾಪುರ ಗ್ರಾಮದಲ್ಲಿ ಕ್ಯಾಂಟೀನ್‌ನಲ್ಲಿ ಕಳ್ಳತನ ನಡೆದಿದೆ. ಖದೀಮರು ಮೊದಲು ಸಿಸಿ ಕ್ಯಾಮರಾವನ್ನು ಒಡೆದು, ಒಳಗಿದ್ದ ಕ್ಯಾಮರಾ ವೈರ್ ಕಿತ್ತು ಕ್ಯಾಮರಾ ಸಹ ಕದ್ದಿರುವ ಘಟನೆ ವರದಿಯಾಗಿದೆ.
ನಂತರ ಕ್ಯಾಂಟೀನ್‌ನಲ್ಲಿದ್ದ ಸಿಗರೆಟ್, ವಿಮಲ್, ಜ್ಯೂಸ್ ಹಾಗೂ ಸುಮಾರು 50 ಸಾವಿರ ರೂ. ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಆಶ್ಚರ್ಯದ ಸಂಗತಿ ಏನೆಂದರೆ, ಕಳ್ಳರು ಕ್ಯಾಂಟೀನ್ ಒಳಗೆ ಜ್ಯೂಸ್ ಕುಡಿದು, ಅರ್ಧ ಬಾಟಲಿಯನ್ನು ಅಲ್ಲಿ ಬಿಟ್ಟು ಹೋಗಿರುವುದು ಸಹ ಕಂಡು ಬಂದಿದೆ.
ಈ ಕ್ಯಾಂಟೀನ್ ಸನಾ ಎಂಬವರಿಗೆ ಸೇರಿದೆ. ಇದೇ ಮೂರನೇ ಸಲ ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪದೇ ಪದೇ ನಡೆಯುತ್ತಿರುವ ಕಳ್ಳತನಗಳಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದು, ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Theft in the canteen
ವರದಿ-ಇರ್ಫಾನ್ ಕನ್ನಡಿಗ

