SUDDILIVE || SHIVAMOGGA
ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಶಿಕ್ಷಕಿಯ ಮಾಂಗಲ್ಯ ಸರ ಕಳುವು-Teacher's wedding chain stolen while traveling in city bus
ಬಸ್ ನಿಲ್ದಾಣದಿಂದ ಮನೆಗೆ ತೆರಳಲು ಸಿಟಿ ಬಸ್ ನಲ್ಲಿ ಸಂಚರಿಸುತ್ತಿರುವಾಗ ಸರ್ಕಾರಿ ಶಿಕ್ಷಕಿಯ ವ್ಯಾನಿಟಿ ಬ್ಯಾಗ್ ನಿಂದ ಸುಮಾರು 40 ಗ್ರಾಂ ಮೌಲ್ಯದ ಮಾಂಗಲ್ಯ ಸರವನ್ನು ಅಪಹರಿಸಿರುವ ಘಟನೆ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಳಿಇ ಎಂಬ 58 ವರ್ಷದ ಮಹಿಳೆ ದೊಡ್ಡಿಬೀಳಿನಲ್ಲಿರುವ ಅಮೃತನೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಮಾರ್ಚ್ 12ನೇ ತಾರೀಕಿನಂದು ಕೆಲಸ ಮುಗಿಸಿಕೊಂಡು ಶಿವಮೊಗ್ಗದ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಹಿಡಿದು ಗೋಪಾಲದಲ್ಲಿರುವ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗಲೇ ಸೀಟು ಬಿಟ್ಟುಕೊಟ್ಟ ಪಕ್ಕದ ಸೀಟಿನ ಮಹಿಳೆಯು ನಿಮ್ಮ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರವು ನೇತಾಡುತ್ತಿದೆ ಎಂದು ಹೇಳಿದಾಗ ಶಿಕ್ಷಕಿ ಸರೋಜಾ ಸರವನ್ನ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಹಾಕಿಕೊಂಡಿದ್ದರು. ಗುಡ್ ಲಕ್ ಸರ್ಕಲ್ ನ ಬಳಿಯಿದ್ದಾಗ ಬ್ಯಾಗ್ ನಲ್ಲಿದ್ದ ಚಿನ್ನದ ಮಾಂಗಲ್ಯ ಸರ ರಾಮಕೃಷ್ಣ ಶಾಲೆಯ ಬಳಿ ಬಸ್ ನಿಲ್ದಾಣದಲ್ಲಿ ಇಳಿದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದಿದ್ದು ಕಳುವಾಗಿದೆ. ಪ್ರಕರಣ ಶಿವಮೊಗ್ಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Teacher's wedding chain stolen while traveling in city bus
