SUDDILIVE || SHIVAMOGGA
ದೂರಸಂಪರ್ಕ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಬಿವೈಆರ್ ಸಭೆ-BYR meeting to further improve telecommunication services
ಶಿವಮೊಗ್ಗ ಜಿಲ್ಲೆಯಾದ್ಯಂತ ದೂರಸಂಪರ್ಕ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಇಂದು ನಡೆದ ಬಿ.ಎಸ್.ಎನ್.ಎಲ್ (BSNL) ದೂರಸಂಪರ್ಕ ಸಲಹಾ ಸಮಿತಿ (Telecom Advisory Committee - TAC) ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲೆಯ ಗ್ರಾಮೀಣ ಮತ್ತು ಮಲೆನಾಡು ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳನ್ನು ಬಗೆಹರಿಸುವುದು, 4G ಮತ್ತು 5G ಸೇವೆಗಳ ವಿಸ್ತರಣೆ ಹಾಗೂ ಬಿ.ಎಸ್.ಎನ್.ಎಲ್ ಫೈಬರ್ ಇಂಟರ್ನೆಟ್ ಸಂಪರ್ಕವನ್ನು ಮನೆ ಮನೆಗೆ ತಲುಪಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಬಿ.ಎಸ್.ಎನ್.ಎಲ್ ಪ್ರಧಾನ ವ್ಯವಸ್ಥಾಪಕರಾದ (GM) ಶ್ರೀ ವಿನಯ್ ಕುಮಾರ್ ಸಿನ್ಹಾ, ಪ್ರಮುಖರಾದ ಸವಿತಾ ಅವರು ಹಾಗೂ ಸಮಿತಿಯ ಸದಸ್ಯರು ಮತ್ತು ಬಿ.ಎಸ್.ಎನ್.ಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
BYR meeting to further improve telecommunication services

